76 ಕೆ.ಜಿ. ಕೇಕ್ ಕತ್ತರಿಸಿ ಸಿದ್ದರಾಮಯ್ಯ ಜನ್ಮದಿನ ಆಚರಣೆ

ಬೀದರ್: ಆ.4:ಇಲ್ಲಿಯ ಬೊಮ್ಮಗೊಂಡೇಶ್ವರ ವೃತ್ತದಲ್ಲಿ 76 ಕೆ.ಜಿ.ಯ ಕೇಕ್ ಕತ್ತರಿಸಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 76ನೇ ಜನ್ಮದಿನ ಆಚರಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಅಮೃತರಾವ್ ಚಿಮಕೋಡೆ ಹಾಗೂ ಮಲ್ಲಿಕಾರ್ಜುನ ಬಿರಾದಾರ(ಪರಿಹಾರ) ಅವರ ನೇತೃತ್ವದಲ್ಲಿ ಬೃಹತ್ ಗಾತ್ರದ ಕೇಕ್ ಕತ್ತರಿಸಲಾಯಿತು.
ಸಚಿವರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕೇಕ್ ತಿನ್ನಿಸಿ, ಸಂಭ್ರಮ ಆಚರಿಸಲಾಯಿತು.
ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂಖಾನ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಆನಂದ ದೇವಪ್ಪ, ಮುಖಂಡರಾದ ದಶರಥ ದೊಡ್ಡಿ, ಶಂಕರ ದೊಡ್ಡಿ, ಹಣಮಂತ ಮಲ್ಕಾಪುರ, ಆನಂದ ದೇವಪ್ಪ, ಗೋವರ್ಧನ್ ರಾಠೋಡ್, ಇರ್ಷಾದ್ ಪೈಲ್ವಾನ್, ಪರ್ವೇಜ್ ಕಮಲ್, ಅನಿಲಕುಮಾರ ಬೆಲ್ದಾರ್, ನರಸಪ್ಪ ಯಾಕತ
ಪÀುರ, ಜಾನ್ ವೆಸ್ಲಿ, ಸುನೀಲ್ ಬಚ್ಚನ್ ಮೊದಲಾದವರು ಇದ್ದರು.