ಸಂಜೆವಾಣಿ ವಾರ್ತೆ
ಜಗಳೂರು.ಅ.೧೦ :- ಕ್ಷೇತ್ರದಲ್ಲಿ ಸಾಮರಸ್ಯತೆಯ ಬದು ಕು ಹಾಗೂ ಸರ್ವತೋಮುಖ ಅಭಿವೃದ್ದಿಗೆ ಒತ್ತುಕೊಡುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅವರು ಭರವಸೆ ನೀಡಿದರು.ತಾಲೂಕಿನ ದೇವಿಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿ ಕೊಂಡಿದ್ದ ನೂತನ ಶಾಸಕರಿಗೆ ಅಭಿನಂದನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕ್ಷೇತ್ರದಲ್ಲಿ ಸರಕಾರದಿಂದ ವೇತನ ಪಡೆಯುವ ಅಧಿಕಾರಿಗಳು ನಿರ್ಲಕ್ಷ್ಯ ಸಾರ್ವಜನಿಕರಿಗೆ ಅಲೆದಾಡಿಸಿದರೆ ನಾನು ಅವರಿಗೆ ಖಡಕ್ ಎಚ್ಚರಿಕೆ ನೀಡುವೆ.ನಾನೂ ಭಾವನಾತ್ಮಕ ಜೀವಿ ಕಂಬನಿಗೆ ಮಿಡಿಯುವೆ ಕೆಟ್ಟದ್ದನ್ನು ಸಹಿಸಲಾರೆ.ಹಲವು ದೇವರುಗಳ ಸನ್ನಿಧಿ ಯಾಗಿರುವ ದೇವಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನರು ನನಗೆ ಅದ್ದೂರಿ ಸ್ವಾಗತೊಂದಿಗೆ ವಿಜೃಂಭಿಸಿದ್ದು ಹರ್ಷತಂದಿದೆ. ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆಗಳಾದ ಶಾಲಾಕಟ್ಟಡ,ರಸ್ತೆ, ಸಾರಿಗೆ ಸೌಕರ್ಯ,ಕಲ್ಯಾಣಮಂಟಪ,ಹೈಟೆಕ್ ಶೌಚಾಲಯ, ನೀರು, ಸೂರು ಸೇರಿದಂತೆ ಸೌಲಭ್ಯಗಳನ್ನು ಹಂತಹಂತವಾಗಿ ನನ್ನ ಆಡಳಿತಾವಧಿಯಲ್ಲಿ ಈಡೇರಿಸುವೆ ಎಂದು ಹೇಳಿದರು.ಜೆಡಿಎಸ್ ಪಕ್ಷ ತೊರೆದು ಉಸ್ತುವಾರಿ ಸಚಿವರಾದ ಮಲ್ಲಿಕಾರ್ಜುನ್ ಅವರ ನೆತೃತ್ವದಲ್ಲಿ ಪಕ್ಷದ ಬಲವರ್ಧನೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳಿಸಿದ್ದು.ಬಸವಾಪುರ ರವಿಯಣ್ಣ ಅಂದಿನಿಂದ ಪಕ್ಷನಿಷ್ಠೆಯಿಂದ ಶ್ರಮಿಸಿದ ಫಲವಾಗಿ ದೈವಾನುಗ್ರಹದಿಂದ ಇಂದು ಶಾಸಕನಾಗಿ ರುವೆ. ವ್ಯಕ್ತಿಗೆ ಒಳ್ಳೆಯದು ಬಯಸಿದವರನ್ನು ಸ್ಮರಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತ ನಾಡಿ,ರಾಜ್ಯದಲ್ಲಿ ಯಾವಂದೂ ಸರಕಾರ ನೀಡದ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೆವು.ಆದರೆ ಬರಗಾಲ ದೊಡ್ಡ ಸವಾಲಾಗಿ ಎದುರಾಗಿದೆ.ಹಿಂಗಾರು ಮಳೆಯಾದರೂ ರೈತರನ್ನು ಕೈಹಿಡಿಯ ಬೇಕಿದೆ.10 ವರ್ಷ ಆಡಳಿತ ನಡೆಸಿದ ಬಿಜೆಪಿ ಸರಕಾರ ನರೇಗಾ ಯೋಜನೆಯನ್ನು ಮಾನದಂಡಗಳೊಂದಿಗೆ ಸಂಪೂರ್ಣ ಕುಂಠಿತ ಗೊಳಿಸಿದೆ.ಸುಳ್ಳಿನ ಪ್ರಚಾರದ ಅಬ್ಬರದಲ್ಲಿ ರಾಜ್ಯದಲ್ಲಿನ ಕೂಲಿ ಕಾರ್ಮಿಕ, ರೈತರನ್ನು,ಯುವಕರನ್ನು ಕಂಗಾಲುಗೊಳಿಸಿದೆ ಎಂದು ಆರೋಪಿಸಿದರು.ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ಗ್ರಾ.ಪಂ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಅಬಿನಂದನಾ ಕಾರ್ಯಕ್ರಮ ದೇವಿಕೆರೆಯಲ್ಲಿ ವಿಳಂಬವಾಗಿತ್ತು.ಇಂದಿನ ಕಾರ್ಯ ಕ್ರಮ ಅರ್ಥಪೂರ್ಣವಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷ ಕೊಟ್ಟಮಾತಿನಂತೆ ಆರ್ಥಿಕ ವ್ಯವಸ್ಥೆಯಲ್ಲಿ ಸಮತೋಲಕಾಪಾಡಿ ಕೊಂಡು ₹76000 ಕೋಟಿ ತೆರಿಗೆ ಹಣ ಸಂಗ್ರಹಿಸಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರಮಾಡುತ್ತಿದ್ದ ಬಿಜೆಪಿ ಪಕ್ಷದವರಿಗೆ ತಕ್ಕ ಪಾಠ ಕಲಿಸಿದೆ ಎಂದು ತಿಳಿಸಿದರು.ಮುಖಂಡ ಬಸವಾಪುರ ರವಿಚಂದ್ರ ಮಾತನಾಡಿ,2018 ರಿಂದ ದೇವಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿ ಅಭಿವೃದ್ದಿ ಮರೀಚಿಕೆ ಯಾಗಿ ದೆ. ಗ್ರಾಮಪಂಚಾಯಿತಿ ಅನುದಾನ ಮಾತ್ರ ದುರ್ಬಳಿಕೆಯಾಗಿದೆ ಬಡಕೂಲಿಕಾರ್ಮಿಕರಿಗೆ ವರದಾನವಾಗಿದ್ದ ನರೇಗಾ ಯೋಜನೆ ಯನ್ನು ಮಾಜಿ ಶಾಸಕರು ಅವರು ಸ್ಥಗಿತಗೊಳಿಸಿದ್ದರು ಎಂದು ದೂರಿದರುಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ ಮ್ಮದ್,ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ಮುಖಂಡರಾದ ಮೆದಗಿನಕೆರೆ ವೀರಣ್ಣ,ವಕೀಲ ಪ್ರಕಾಶ್,ರುದ್ರಸ್ವಾಮಿ,ರಾಮರೆಡ್ಡಿ,ಸಣ್ಣಸೂರಜ್ಜ,ಪಲ್ಲಾಗಟ್ಟೆ ಶೇಖ ರಪ್ಪ,ಪ.ಪಂ ಸದಸ್ಯ ರಮೇಶ್ ರೆಡ್ಡಿ.ಅನುಪ್ ರಡ್ಡಿ.ರುದ್ರೇಶ್, ಹಿರೇಮಲ್ಲನಹಳ್ಳಿ ಲೋಕೇಶ್ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಗುತ್ತಿಗೆದಾರ ಗುರು ಮೂರ್ತಿ ಗ್ರಾ.ಪಂ. ಸದಸ್ಯರಾದ ನಾಗರಾಜ್,ಕರಿಬಸಮ್ಮ, ಚೌಡಮ್ಮ,ತಿಪ್ಪಕ್ಕ,ಸೇರಿದಂತೆ ಇದ್ದರು