75700 ರೂ ಮೌಲ್ಯದ ಬಿಯರ್ ಜಪ್ತಿ

ಯಾದಗಿರಿ,ಏ 24: ಗುರುಮಿಠಕಲ ಮತಕ್ಷೇತ್ರದ ವ್ಯಾಪ್ತಿಯ ಕುಂಟಿಮರಿ ತನಿಖಾ ಠಾಣೆಯಲ್ಲಿ ತೆಲಂಗಾಣ ರಾಜ್ಯದ ನಾರಾಯಣಪೇಟ ಜಿಲ್ಲೆಯ ಕಡೆಯಿಂದ ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ ಬಿಯರ್ ಬಾಟಲುಗಳನ್ನು ಅಬಕಾರಿ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಬಿಯರ್ ಒಟ್ಟು ಮೌಲ್ಯ 75700 ರೂ ಎಂದು ಅಂದಾಜಿಸಲಾಗಿದೆ
ಈ ಸಂಬಂಧ ಮೊಗಲಪ್ಪ ಚಂದ್ರಪ್ಪ ಕೊಂಕಲ್ ಎಂಬಾತನನ್ನು ಬಂಧಿಸಲಾಗಿದೆ. ಅಬಕಾರಿ ಉಪ ನಿರೀಕ್ಷಕ ಬಸವರಾಜ.ಬಿ ರಾಜಣ್ಣ ಅಬಕಾರಿಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಬಕಾರಿ ಮುಖ್ಯ ಪೇದೆ ಅನಿಲ್ ಕುಮಾರ, ವಾಹನ ಚಾಲಕ ದೊಂಡಿಬಾ ಜಾಧವ, ಗೃಹ ರಕ್ಷಕದಳ ಸಿಬ್ಬಂದಿ ಅರ್ಜುನ ಜಾಧವ ಮತ್ತು ಶಿವುಕುಮಾರ ಇದ್ದರು.