ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಗಾಂಧಿಭವನ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಈ ಧನಂಜಯ, ಯಲಿಯೂರು ಇವರು ಕನ್ನಡಕ್ಕೆ ಅನುವಾದಿಸಿರುವ ‘ಎಲ್ಲರ ಭಾರತ’ ಪುಸ್ತಕವನ್ನು ಹಿರಿಯ ಗಾಂಧಿ ಮಾರ್ಗಿಯವರಾದ ತಗಡೂರು ಸತ್ಯನಾರಾಯಣ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಮೈಸೂರು ವಿವಿ ಉಪಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಗಾಂಧಿ ಮತ್ತು ವಿಚಾರ ಪರಿಷತ್ ಅಧ್ಯಕ್ಷ ಪ. ಮಲ್ಲೇಶ್ ಗಾಂಧಿ ಭವನದ ನಿರ್ದೇಶಕ ಪ್ರೊ. ಎಂ.ಎಸ್. ಶೇಖರ್ ಇವರುಗಳಿದ್ದಾರೆ.