ಅಲ್ತಾಫ್ ನಗರ ಜಮಾತ್ ಹುಬ್ಬಳ್ಳಿ ವತಿಯಿಂದ ಅಲ್ತಾಫ್ ನಗರ ಮದರಸಾ ಮತ್ತು ಸ್ಥಳೀಯ ಮಕ್ಕಳಿಗಾಗಿ ಆಯೋಜಿಸಲಾದ ಮಕ್ಕಳ ಇಸ್ಲಾಮಿಕ್ ಗಾಯನ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಮತ್ತು ಭಾಗವಹಿಸಿದವರಿಗೆ ಬಹುಮಾನಗಳನ್ನು ನೀಡಲಾಯಿತು. ಅಲ್ತಾಫ್ ನವಾಜ್ ಕಿತ್ತೂರ, ಎಸ್.ಎಸ್.ಪಠಾಣ, ಅಲ್ಲಾಬಕ್ಸ್ ಸವಣೂರ, ಮೊಹಮ್ಮದ್ ಹನೀಫ್ ಅಣ್ಣಿಗೇರಿ, ಮೌಲಾನಾ ಅಬ್ದುಲ್ ಹಕೀಂ ತಹಶೀಲ್ದಾರ್, ಹಾಫಿಝಿ ನಿಸಾರ್ ಅಹ್ಮದ್, ಮೌಲಾನಾ ಶಬ್ಜಾನ್ ಹರಕುಣಿ, ದಾವಲ್ ಸಾಬ್ ಮುಲ್ಲಾ, ಹಜರೇಸಾಬ್ ಯಲಿಗಾರ, ಆಸಿಫ್ ಪಲ್ಲನ್, ಇಸ್ಮಾಯಿಲ್ ಅಗಸನಮಟ್ಟಿ, ಕ. ಫಕ್ರುದ್ದೀನ್ ಧಾರವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.