ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಮರಾವತಿ ನಗರ ವಾರ್ಡ್‌ನಲ್ಲಿ ೫ ಪಿಪಿಡಿ ಸಂಸ್ಕರಣಾ ಸಾಮರ್ಥ್ಯದ ನವೀಕರಿಸಿದ ಜೈವಿಕ ಅನಿಲ ಘಟಕವನ್ನು (ಬಿಬಿಎಂಪಿ) ಶಾಸಕ ಅಶ್ವತ್ ನಾರಾಯಣ ಉದ್ಘಾಟಿಸಿದರು. ವಾರ್ಡ್ ೪೫ರ ನಿಕಟಪೂರ್ವ ಬಿಬಿಎಂಪಿ ಸದಸ್ಯ ಜೈಪಾಲ್, ವಾರ್ಡ್ ೩೫ರ ನಿಕಟಪೂರ್ವ ಬಿಬಿಎಂಪಿ ಸದಸ್ಯ ಸುಮಂಗಳಾಕೇಶವಮೂರ್ತಿ, ಮಂಡಳ ಅಧ್ಯಕ್ಷ ಕಾವೇರಿ ಕೇದಾರ್‌ನಾಥ್, ಮಲ್ಲೇಶ್ವರ ವಾರ್ಡ್ ಬಿಜೆಪಿ ಅಧ್ಯಕ್ಷ ವಿಜಯಕುಮಾರ್, ಬಿಬಿಎಂಪಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರೇಖಾ ಇತರರು ಇದ್ದರು.