ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ನಾಳೆ ಕನ್ನಡ ಒಕ್ಕೂಟ ಕರೆದಿರುವ ಅಖಂಡ ಕರ್ನಾಟಕ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಲು ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಮೈಸೂರು ಬ್ಯಾಂಕ್ ವೃತ್ತದಿಂದ ಪದಾಧಿಕಾರಿಗಳು ನಗರದಾದ್ಯಂತ ಸಂಚರಿಸಿ ಮನವಿ ಮಾಡಿದರು. ಮುಖಂಡರಾದ ಸಾ.ರಾ. ಗೋವಿಂದು, ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕೆ.ಆರ್. ಕುಮಾರ್, ಎನ್. ಮೂರ್ತಿ, ಗಿರೀಶ್ ಗೌಡ, ಸಿ.ವಿ. ದೇವರಾಜ್, ಮತ್ತಿತರ ಮುಖಂಡರು ಭಾಗವಹಿಸಿದ್ದರು.