75 ವೀರಯೋಧ,ಯೋಗಾ ಗುರುಗಳಿಗೆ ಸನ್ಮಾನ ಪ್ರಗತಿಗಾಗಿ ಪಾದಯಾತ್ರೆ :ಬಾಲರಾಜ್ ಗುತ್ತೇದಾರ್

ಸೇಡಂ,ಆ,04: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಯೋಗಾಸನ ವೀರಯೋಧರಿಗೆ ಒಟ್ಟು 75 ಜನರಿಗೆ ವಿಶೇಷ ಸನ್ಮಾನ ಕಾರ್ಯಕ್ರಮದ ಆಯೋಜಿಸಲಾಗಿದೆ ಎಂದು ಸೇಡಂ ವಿಧಾನಸಭೆ ಮತಕ್ಷೇತ್ರ ಶಾಸಕ ಅಭ್ಯರ್ಥಿ ಬಾಲರಾಜ್ ಗುತ್ತೇದಾರ್ ಹೇಳಿದರು.
ಪಟ್ಟಣ ಚಿಂಚೋಳಿ ರಸ್ತೆಯಲ್ಲಿರುವ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್ 15ರಿಂದ ಮನೆ ಮನೆಗೆ ಜೆಡಿಎಸ್ ಪ್ರಗತಿಗಾಗಿ ಪಾದಯಾತ್ರೆ ಕೈಗೋಳಲಾಗಿದು ಈ ಪಾದಯಾತ್ರೆಯಲ್ಲಿ ಜೆಡಿಎಸ್ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಜೆಡಿಎಸ್ ಮುಖಂಡರಾದ ಬಾಲರಾಜ ಗುತ್ತೇದಾರ, ಕೋರ ಕಮಿಟಿ ಅಧ್ಯಕ್ಷರಾದ ಆರ್.ಆರ್. ಪಾಟೀಲ, ಕಾರ್ಯಾಧ್ಯಕ್ಷರಾದ ಶಿವರಾಮರೆಡ್ಡಿ, ಮಾಜಿ ಅಧ್ಯಕ್ಷ ಜಗನ್ನಾಥರೆಡ್ಡಿ ಗೊಟೂರ, ಪ್ರಧಾನ ಕಾರ್ಯದರ್ಶಿ ಶಿವಪುತ್ರಪ್ಪ ಮೋಘಾ, ಮೈನಾರಿಟಿ ಘಟಕ ಅಧ್ಯಕ್ಷ ಚಾಂದಪಾಶಾ, ಮುಖಂಡರಾದ ಗೋವರ್ಧನರೆಡ್ಡಿ ಮೋತಕಪಲ್ಲಿ, ವೆಂಕಟರೆಡ್ಡಿ ಪಾಟೀಲ ಗಾಡದಾನ, ಶಂಭುಲಿಂಗ ನಾಟೀಕಾರ, ಬಾಲರಾಜ ಬ್ರಿಗೇಡ್ ಅಧ್ಯಕ್ಷ ಶಿವಕುಮಾರ ಅಪ್ಪಾಜಿ ಇನ್ನಿತರರು ಉಪಸ್ಥಿತರಿದ್ದರು.