75 ನೇ ಗಣರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಹನೂರು ಜ 28 :- ಬೆಂಗಳೂರಿನ ಶೇಷಾದ್ರಿಪುರದಲ್ಲಿ ನಡೆದ 75 ನೇ ಗಣರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಆರ್.ಟಿ.ಐ ಕಾರ್ಯಕರ್ತ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ರಂಗಸ್ವಾಮಿ ಅವರನ್ನು ಭೀಮ ಪುತ್ರಿ ಬ್ರಿಗೇಡ್ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ.
ಬೆಂಗಳೂರು ಶೇಷಾದ್ರಿಪುರದಲ್ಲಿ ಭೀಮ ಪುತ್ರಿ ಬ್ರಿಗ್ರೇಡ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಭೀಮ ಪುತ್ರಿ ಬ್ರಿಗೇಡ್” ಸಂಸ್ಥಾಪಕ ಅಧ್ಯಕ್ಷರು ರೇವತಿ ರಾಜ್, ಅವರು ಪಾಳ್ಯ ರಂಗಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಭೀಮ ಪುತ್ರಿ ಬ್ರಿಗ್ರೇಡ್ ಸಂಸ್ಥಾಪಕ ಅಧ್ಯಕ್ಷರು ರೇವತಿ ರಾಜ್, ರಾಜ್ಯಾಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಕುಮಾರ್,
ಭೀಮ ಟಿವಿ ಚಾನೆಲ್ ವ್ಯವಸ್ಥಾಪಕ ಸಿ.ಎಸ್ ರಘು, ಡಾII ಭಾನುಪ್ರಕಾಶ್ ,ಆಟೋ ಚಾಲಕರ ಸಂಘದ ನಾಗರಾಜು, ಚೇತನ್ ಸೇರಿದಂತೆ ಇನ್ನಿತರರು ಹಾಜರಿದ್ದರು.