75 ನೇಸ್ವಾತಂತ್ರ್ಯ ಮಹೋತ್ಸವ: ವಿವಿಧ ಸ್ಪರ್ಧೆ

ಕಲಬುರಗಿ ಜು 30: ಬರುವ 15ನೇ ಆಗಷ್ಟ ಕ್ಕೆ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ಣಗೊಳ್ಳುತ್ತಿರುವ ಶುಭ ಸಂದರ್ಭದಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕ,ಸ್ನಾತಕೊತ್ತರ ವಿದ್ಯಾರ್ಥಿಗಳಿಗೆ ರಾಷ್ಟ್ರದ ಮಹೋನ್ನತ ಇತಿಹಾಸದ ನೆನಪುಗಳನ್ನು ಪುನ:ಜೀವಂತಗೊಳಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಚಟುವಟಿಕೆಗಳನ್ನು ಕಾಲೇಜು ಹಂತ, ವಿಶ್ವವಿದ್ಯಾಲಯದ ಹಂತ ಹಾಗೂ ರಾಜ್ಯಮಟ್ಟದ ಹಂತದಲ್ಲಿ ಅಯೋಜಿಸಲು ರಾಜ್ಯ ಸರಕಾರ ಅಯೋಜಿಸಲು ಸೂಚಿಸಿದೆ. ಈ ಸಂಭ್ರಮಾಚರಣೆಯ ಅಂಗವಾಗಿ ಶುಕ್ರವಾರದಂದು
ವಿಶ್ವವಿದ್ಯಾಲಯದಲ್ಲಿ ಪ್ರಭಂದ ಸ್ಪರ್ಧೆ,ಚರ್ಚಾ ಸ್ಪರ್ಧೆ,ಪೇಂಟಿಂಗ್ ಸ್ಪರ್ಧೆ,ದೇಶ ಭಕ್ತಿಗೀತೆ ಗಳ ಸ್ಪರ್ಧೆ,ಏಕ ವ್ಯಕ್ತಿ ಹಾಗೂ
ಸಮೂಹ ಗೀತೆಗಳ ಸ್ಪರ್ಧೆಕಿರು ನಾಟಕಗಳ ಸ್ಪರ್ಧೆ,ಪೋಸ್ಟರ್ ತಯಾರಿಕೆ ಸ್ಪರ್ಧೆ,ಸ್ವಾತಂತ್ರ್ಯ ಓಟದ ಸ್ಪರ್ಧೆನಡೆಸಲಾಯಿತು.ಸ್ವಾತಂತ್ರ್ಯ ಓಟದ ಸ್ಪರ್ಧೆಯನ್ನು ಕುಲಪತಿಗಳು ಡಾ. ದಯಾನಂದ ಅಗ
ಸರ ಅವರು ಉದ್ಘಾಸಿದರು ಈಸಂದರ್ಭದಲ್ಲಿ ಡಾ ಹಣಮಂತ ಜಂಗೆ, ಡಾ ನಿಂಗಣ ಕಣ್ಣೂರ, ಡಾ. ಎಂ ಎಸ್ ಪಾಸೋಡಿ ಸಾಂಸ್ಕøತಿಕ ಸಂಯೋಜಕ ಡಾ ಕೆ. ಲಿಂಗಪ್ಪ, ಇದ್ದರು. ಈ ಎಲ್ಲಾ ಮೇಲ್ಲಿನ ಸ್ಪರ್ಧೆಗಳಲ್ಲಿ ಸುಮಾರು 50 ಕಾಲೇಜುಗಳು ಭಾಗವಹಿಸಿದವು