75ನೇ ಸ್ವಾತಂತ್ರ ಮಹೋತ್ಸವ ಸವಿ ನೆನಪಿಗಾಗಿ ನರೇಗಾ ಯೋಜನೆಯಡಿ 10 ಕೆರೆ ನಿರ್ಮಾಣ

ಹುಮನಾಬಾದ್:ಆ.5: ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯ ಭಾಗವಾಗಿ ತಾಲ್ಲೂಕಿನಲ್ಲಿ 10 ಕೆರೆಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಭಿವೃದ್ದಿ ಮಾಡಲಾಗುತ್ತಿದೆ. ಎಂದು ತಾಪಂ. ಇಒ ಗೋವಿದರಾವ ತಿಳಿಸಿದ್ದರು.
ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ನಡೆಯುತ್ತಿರುವ ರಾಮತೀರ್ಥ ಕೆರೆ ಕಾಗಾರಿಯನ್ನು ಪರಿಶೀಲನೆ ಮಾಡಿ ಮಾತನಾಡಿದ ಅವರು. 75ನೇ ಸ್ವಾತಂತ್ರ?? ಮಹೋತ್ಸವ ಸವಿ ನೆನಪಿಗಾಗಿ ಅಮೃತ ಸರೋವರಗಳು ಎಂದು ನಾಮಕರಣ ಮಾಡಿ. ಆ.15ರಂದು ಸ್ವಾತಂತ್ರ?? ಹೋರಾಟಗಾರರು ಅಥವಾ ಅವರ ಕುಟುಂಬದ ಸದಸ್ಯರಿಂದ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯ ಹಿರಿಯ ನಾಗರಿಕರಿಂದ ಕೆರೆಗಳ ಮುಂದೆ ಧ್ವಜಾರೋಹಣ ಮಾಡಿ ಸ್ವಾತಂತ್ರೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ಅಮೃತ ಸರೋವರ ಯೋಜನೆಯಡಿ ನಿರ್ಮಾಣವಾದ ಕೆರೆಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುವುದು, ಹಸಿರು ಹುಲ್ಲು ನೆಟ್ಟು ಹಸಿರನ್ನು ಅಭಿವೃದ್ಧಿಪಡಿಸಲಾಗುವುದು ಹಾಗೂ ಕೆರೆಯ ಸುತ್ತಮುತ್ತ ಮರಗಿಡಗಳನ್ನು ಬೆಳೆಸುವುದರ ಜೊತೆಗೆ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಆಸನಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಮಳೆ ನೀರನ್ನು ಸಂಗ್ರಹಿಸುವ ಮೂಲಕ ಅಂತರ್ಜಲ ಮಟ್ಟವನ್ನು ಸುಧಾರಿಸುವುದು, ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಕೆರೆಗಳನ್ನು ಪುನರುಜೀವನಗೊಳಿಸುವ ಜೋತೆಗೆ ಧನ ಕರುಗಳಿಗೆ ಕುಡಿಯುವ ನೀರು ಹಾಗೂ ಸಣ್ಣ ಪುಟ್ಟ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ಒದಗಿಸುವ ಗುರಿಯನ್ನು ಅಮೃತ ಸರೋವರ ಮಿಷನ್ ಹೊಂದಿದೆ ಎಂದರು.
ಅಮೃತ ಸರೋವರ ಯೋಜನೆಯಡಿಯಲ್ಲಿ ಕೆರೆಗಳು ಅಭಿವೃದ್ದಿ ಪಡಿಸುವುದರ ಜೋತೆಗೆ ಪರಿಸರ ಸಂರಕ್ಷಣೆಯ ಮತ್ತು ನಿಸರ್ಗ ಸಂಸ್ಕøತಿ ಕಾಪಾಡುವ ಉದ್ದೇಶದಿಂದ ಹಾಗೂ ಗ್ರಾಮದ ನರೇಗಾ ಕೂಲಿ ಕಾರ್ಮಿಕರು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ವಿಶೇಷ ಆದ್ಯತೆ ನೀಡಲಾಗಿದೆ. ಗ್ರಾಮೀಣ ಸಮುದಾಯದಲ್ಲಿ ಸಮರ್ಪಕ ನೀರಿನ ಸಂರಕ್ಷಣೆ, ಸದ್ಬಳಕೆ ಕುರಿತಂತೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಗ್ರಾಮಸ್ಥರಿಗೆ ಜಲಮೂಲ ಮತ್ತು ಜಲಸಂರಕ್ಷಣೆ ಕುರಿತು ಅರಿವು ಮೂಡಿಸಲಾಗುತ್ತಿದ್ದು, ಅಮೃತ ಸರೋವರ ಪೆÇೀರ್ಟಲ್‍ನಲ್ಲಿ ಕೆರೆಗಳ ಮಾಹಿತಿಯನ್ನು ಅಪ್‍ಲೋಡ್ ಮಾಡಲಾಗಿದೆ. ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸುವುದರೊಂದಿಗೆ ಗ್ರಾಮಗಳಲ್ಲಿ ಶಾಶ್ವತ ಹಾಗೂ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುವ ಸದುದ್ದೇಶದಿಂದ ಸರಕಾರ ಅಮೃತ ಸರೋವರ ಯೋಜನೆ ಜಾರಿಗೊಳಿಸಿದ್ದೆ ಎಂದು ತಿಳಿಸಿದ್ದರು.

ಕೆರೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಕೆರೆಗಳ ನಿರ್ಮಾಣ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಉಳಿದ ಕಾಮಗಾರಿಗಳನ್ನು ಮುಂದಿನ ಅಂದರೆ ಆಗಸ್ಟ್ 15ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ತಾಪಂ. ತಾಂತ್ರಿಕ ಸಂಯೋಜಕ ಶಿವರಾಜ ಪಾಟೀಲ್, ತಾಪಂ. ಐಇಸಿ ಸಂಯೋಜಕ ಉಮೇಶ ಮಲಗಿ, ತಾಪಂ. ಎಂಐಎಸ್ ಸಂಯೋಜಕ ಎಂ.ಡಿ. ಮೌಲಾನ್, ತಾಪಂ. ತಾಂತ್ರಿಕ ಸಹಾಯಕ ಪವನಕುಮಾರ ನಿಟ್ಟೂರೆ, ಬಿಎಫ್‍ಟಿ ಸುನಿಲ್‍ಕುಮಾರ್, ಗ್ರಾಪಂ. ಪಿಡಿಒ ನಾಗಯ್ಯಾ ಸ್ವಾಮಿ, ಗ್ರಾಪಂ ಸದ್ಯಸರು ಆನಂದ ಕುಂಟಬಾಬೊನೋರ್, ತಾಹೇರ್‍ಮಿಯ್ಯಾ, ರವಿ ರಾಂಪೂರೆ, ಶ್ರೀಧರ್ ಚೀನಕೇರಾ, ರಾಮಶೇಟ್ಟಿ ಹಣಮಶೇಟ್ಟಿ, ಚಂದ್ರಕಾಂತ ರೇಂಜೆರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.