ಕರ್ನಾಟಕ ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದ ೩ನೇ ವಾರ್ಷಿಕೋತ್ಸವ ಸಮಾರಂಭ ಇಂದು ಬೆಳಿಗ್ಗೆ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ನಾಗರೀಕ ಸೇವೆಗಳಿಗೆ ಪದೋನ್ನತಿ ಹೊಂದಿರುವ ಸಮುದಾಯದ ಗಣ್ಯರನ್ನು ಸಚಿವರಾದ ಈಶ್ವರಖಂಡ್ರೆ, ಡಾ. ಶರಣ ಪ್ರಕಾಶ ಪಾಟೀಲ್, ಶ್ರೀ ಸಿದ್ದಲಿಂಗಸ್ವಾಮೀಜಿ, ಸಿರಿಗೆರೆ ಬೃಹನ್ಮಠದ ಶ್ರೀ ಶಿವಮೂರ್ತಿ ಸ್ವಾಮೀಜಿ ಸನ್ಮಾನಿಸಿದರು. ಮಾಜಿ ಮೇಯರ್ ಬಿ.ಎಸ್ ಪುಟ್ಟರಾಜು ಇದ್ದಾರೆ.