ದಾವಣಗೆರೆಯ “ಜಿಲ್ಲೆ ಸಮಾಚಾರ” ದಿನಪತ್ರಿಕಾ ಬಳಗದ ಆಶ್ರಯದಲ್ಲಿ  ರೋಟರಿ ಬಾಲಭವನದ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ “ಜಿಲ್ಲೆ ಸಮಾಚಾರ” ಪತ್ರಿಕೆಯ ಸಂಸ್ಥಾಪಕರಾದ ವಿ.ಹನುಮಂತಪ್ಪನವರ ಲೇಖನಗಳ ಸಂಗ್ರಹದ “ಆಕಾಶಕ್ಕೆ ಏಣಿ’ ಕೃತಿ ಲೋಕಾರ್ಪಣೆಗೊಂಡಿತು. ಈ ವೇಳೆ ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಅಧ್ಯಕ್ಷತೆ ವಹಿಸಿದ್ದರು.  ದಾವಣಗೆರೆ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ,  ಅನ್‌ಮೋಲ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಸಿ.ಜಿ. ದಿನೇಶ್, ಪತ್ರಿಕಾ ಬಳಗದ ಅಧ್ಯಕ್ಷೆ ಸತ್ಯಭಾಮ ಮಂಜುನಾಥ್, ಸಾಲಿಗ್ರಾಮ ಗಣೇಶ್ ಶೆಣೈ, ಎಚ್. ಭಾರತಿ, ಎಚ್. ವೆಂಕಟೇಶ, ಪಾಪುಗುರು,ಎನ್ ಕೆ ಕೊಟ್ರೇಶ್ ಉಪಸ್ಥಿತರಿದ್ದರು.  ಉಚಿತ ಗಾಯನ ಸಮೂಹಗೀತೆ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು  ವಿಜೇತರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.