
ನವಲಗುಂದ,ಸೆ.15 : ಮಕ್ಕಳ ಪ್ರತಿಭೆಗಳನ್ನು ಎತ್ತಿ ತೋರಿಸಲು ಇಂತಹ ವೇದಿಕೆಗಳನ್ನು ಉಪಯೋಗಿಸಿಕೊಳ್ಳಬೇಕು, ಶಿಕ್ಷಣದ ಜೊತೆಗೆ ಕಲೆಗಳಿಗೆ ಪೆÇ್ರೀತ್ಸಾಹ ನೀಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ಪಟ್ಟಣದ ಬಸವೇಶ್ವರ ನಗರದ ಉರ್ದು ಶಾಲೆಯ ಆವರಣದಲ್ಲಿ ನವಲಗುಂದ ಹಾಗೂ ಅಣ್ಣಿಗೇರಿ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೆ ವೇಳೆ ಶಾಸಕರನ್ನು ಸನ್ಮಾನಿಸಲಾಯಿತು
ಈ ವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಸಿಆರ್ ಪಿ ಗಳಾದ ಐ ಎಸ್ ಮಕಾಂದಾರ, ಎಚ್ ಎಂ ಗುರಾಣಿ, ಎಸ್ ಎಫ್ ನೀರಲಗಿ, ಎ ಬಿ ಕೊಪ್ಪದ, ವೆಂಕಟೇಶ್ ಭಜಂತ್ರಿ, ಗಣೇಶ ಎಸ್ ಹೊಳೆಯನ್ನವರ, ಯು ಎಂ ನದಾಫ್, ಝೆಡ್ ಡಿ ಕೊತ್ವಾಲ್, ಎಸ್ ಐ ತಟಗಾರ, ಅಭಿದಾಬೇಗಂ ಮುಲ್ಲಾ, ಸಿ ಎಚ್ ಜಗಾಪುರ, ಎಸ್ ಡಿ ಎಂ ಸಿ ಅಧ್ಯಕ್ಷ ಆಸ್ಪಕಅಲಿ ಚಾಹುಸೇನ, ಇಮಾಮಸಾಬ್ ಲೋಕಾಪುರಿ, ಪುರಸಭೆ ಸದಸ್ಯರಾದ ಮೋದಿನ ಶಿರೂರು, ಜೀವನ ಪವಾರ, ಪ್ರಕಾಶ್ ಶಿಗ್ಲಿ, ಸೇರಿದಂತೆ ಶಾಲಾ ಶಿಕ್ಷಕರು ಮುದ್ದು ಮಕ್ಕಳು ಹಿರಿಯರು ಉಪಸ್ಥಿತರಿದ್ದರು.