ಕಾಳಗಿ :ತಾಲ್ಲೂಕಿನ ಸುವರ್ಣ ಗಿರಿ ಸುಗೂರು(ಕೆ) ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಬ್ರಹ್ಮೋತ್ಸವ ನಿಮಿತ್ತವಾಗಿ, ಮುಂಜಾನೆ ಹಂಸ ವಾಹನ ಸೇವೆ, ಸೋಮವಾರ ರಾತ್ರಿ ವೆಂಕಟೇಶ್ವರ ಸ್ವಾಮಿಯ ಹೊತ್ತ ಗಜಾ ವಾಹನ ಸೇವೆ ತಿರುಪತಿಯ ವೈದಿಕ ವಿಧಿವಿಧಾನಗಳ ಪ್ರಕಾರ ನೆರವೇರಿತು.ತಿರುಪತಿ ‌ತಿರುಮಲದ ಪೂಜ್ಯ ಕೃಷ್ಣ ದಾಸ ಮಹಾರಾಜ, ಪೂಜ್ಯ ಪವನದಾಸ ಮಹಾರಾಜ, ಅರ್ಚಕ ಕೇಶವದಾಸ ಮಹಾರಾಜ, ಸುಬ್ರಮಣ್ಯಂ ಶಾಸ್ತ್ರಿ, ಶಿವಂ ಶಾಸ್ತ್ರಿ, ಕಮಲನಯನ ಮಹಾರಾಜ, ಸುಶೀಲ್ ಚತುರ್ವೇದಿ, ದತ್ತಾತ್ರೇಯ ಮುಚ್ಚಟ್ಟಿ, ಸಿದ್ದು ಕೇಶ್ವರ, ಇದ್ದರು.