ಇಡಿ, ಡಿಇಡಿ ಶಿಕ್ಷಣ ಎಕ್ಸ್‌ಪೋ ವತಿಯಿಂದ ಪೋಷಕರು ಮತ್ತು ಶಿಕ್ಷಕಣದ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಹಾಗೂ ಎಕ್ಸ್‌ಪೋ ಸೇತುವೆಯನ್ನ ನಿರ್ಮಾಣ ಮಾಡಲಾಗಿತ್ತು. ಈ ವೇಳೆ ಹಲವು ಸ್ಟಾಲ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಶಿಕ್ಷಕರು, ಪೋಷಕರ ನಡುವೆ ಆತ್ಮೀಯ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಇಡಿ, ಡಿಇಡಿನ ಸಹ ಸಂಸ್ಥಾಪಕ ಸಂಧ್ಯಾವಿಸ್ವಾನ್ ಸೇರಿದಂತೆ ಪೋಷಕರು ಹಾಗೂ ಇತರ ಶಿಕ್ಷಕರು ಹಾಜರಿದ್ದರು.