74 ಲೀಟರ್ ಮದ್ಯ ಜಪ್ತಿ

ಕಲಬುರಗಿ,ಏ.15-ಅಬಕಾರಿ ಇಲಾಖೆ ಅಧಿಕಾರಿಗಳು ನಗರದ ಸುಲ್ತಾನಪುರ ಕ್ರಾಸ್ ಹತ್ತಿರವಿರುವ ಪಾನ್‍ಶಾಪ್ ಮೇಲೆ ದಾಳಿ ಮಾಡಿ 74.880 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ.
ಅಬಕಾರಿ ಆಯುಕ್ತರು, ಅಬಕಾರಿ ಜಂಟಿ ಆಯುಕ್ತರು ಮತ್ತು ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಈ ದಾಳಿ ನಡೆಸಿ ಪಾನ್‍ಶಾಪ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.