74 ಕೋಟಿಗೂ ಅಧಿಕ ಲಸಿಕೆ ಕೇಂದ್ರದಿಂದ ಖರೀದಿ

ನವದೆಹಲಿ, ಜೂ.8- ದೇಶದಲ್ಲಿ ಈ ತಿಂಗಳ 21 ರಿಂದ 18 ದಾಟಿದ ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕಲು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಬೆನ್ನಲ್ಲೇ 74 ಕೋಟಿ‌ಗೂ ಅಧಿಕ ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಆರ್ಡರ್ ನೀಡಿದೆ.

ಈ ಪೈಕಿ ಕೋವಿಶೀಲ್ಡ್, ಕೋವಾಕ್ಸಿನ್,‌ಜೈವಿಕ- ಲಸಿಕೆ ಕಾರ್ಬೋ ವಾಕ್ಸ್ ಖರೀದಿಗೆ ಮುಂದಾಗಿರುವುದಾಗಿ ನೀತಿ ಆಯೋಗದ ಸದಸ್ಯರ ಡಾ.ವಿ.ಕೆ ಪಾಲ್ ತಿಳಿಸಿದ್ದಾರೆ‌.

25 ಕೋಟಿ ಕೋವಿಶೀಲ್ಡ್ ,19 ಕೋಟಿ ಕೊವಾಕ್ಸಿನ್,30 ಕೋಟಿ ಜೈವಿಕ -ಇ ಕಾರ್ಬೋ ವಾಕ್ಸ್ ಲಸಿಕೆ ಖರೀದಿಗೆ ಔಷಧ ತಯಾರಕ ಸಂಸ್ಥೆಗಳಿಗೆ ಆರ್ಡರ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಎಲ್ಲಾ ಲಸಿಕೆ ಸೆಪ್ಟಂಬರ್ ಅಂತ್ಯದ ವೇಳೆಗೆ ದೇಶದಲ್ಲಿ ಸಿಗಲಿದೆ‌.ಕೋವಿಶೀಲ್ಡ್ 25 ಕೋಟಿ ಮತ್ತು ಕೋವಾಕ್ಸಿನ್‌ 19 ಕೋಟಿ ಲಸಿಕೆ ಸೇರಿದಂತೆ ಒಟ್ಟಿ 44 ಕೋಟಿ ಡೋಸ್ ಲಸಿಕೆ 2021ರ ಡಿಸೆಂಬರ್ ತನಕ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ

ಇದರ ಜೊತೆಗೆ ಹೆಚ್ಚುವರಿಯಾಗಿ ಈ ಎರಡೂ ಡೋಸ್ ಲಸಿಕೆಯನ್ನು ಭಾರತೀಯ ಸೆರಂ ಸಂಸ್ಥೆ ಮತ್ತು ಭಾರತ್ ಭಯೋಟೆಕ್ ಸಂಸ್ಥೆ ಯಿಂದ ಖರೀದಿ‌ ಮಾಡಲು ಮುಂದಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಜೈವಿಕ – ಇ ಆಶಾದಾಯಕ:

ದೇಶಿಯವಾಗಿ ಉತ್ಪಾದನೆ ಮಾಡುತ್ತಿರುವ ಜೈವಿಕ ಲಸಿಕೆಯ ಆಶಾದಾಯಕವಾಗಿದೆ. ಈ ಕಾರಣದಿಂದಲೇ 30ಕೋಟಿ ಲಸಿಕೆ ಖರೀದಿಗೆ ಆರ್ಡರ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೈವಿಕ-ಇ ಲಸಿಕೆಯ ಕುರಿತು ಕಂಪನಿಯ ಜೊತೆ ದರ ನಿಗಧಿ ಕುರಿತಂತೆ ಮಾತುಕತೆ ನಡೆಯುತ್ತಿದೆ ಇನ್ನೂ ಕೂಡ ಅಂತಿಮವಾಗಿ ದರ ನಿಗದಿ ಮಾಡಿಲ್ಲ ಆದರೂ ಕೂಡ 30ಕೋಟಿ ಡೋಸ್ ಲಸಿಕೆಗೆ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಕೇಂದ್ರ ಸರ್ಕಾರ ನಿರಂತರವಾಗಿ ಮಾತುಕತೆ ನಡೆಯುತ್ತಿದೆ ಶೀಘ್ರದಲ್ಲಿ ಪ್ರತಿ ಡೋಸ್ ಲಸಿಕೆಗೆ ದರ ನಿಗದಿ ಮಾಡುವುದು ಹೇಗೆ ಅವರು ತಿಳಿಸಿದ್ದಾರೆ

ಶೇ.79 ರಷ್ಟು ಸೋಂಕು ಇಳಿಕೆ:

ದೇಶದಲ್ಲಿ ಎರಡನೇ ಅಲೆಯ ಗರಿಷ್ಠ ಸೋಂಕಿನ ಪೈಕಿ ಶೇ.79 ರಷ್ಟು ಸೋಂಕು ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ದೇಶದ ಹಲವು ರಾಜ್ಯಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಎರಡು ತಿಂಗಳಿಗೂ ಹೆಚ್ಚು ಸಮಯದ ಬಳಿಕ ಒಂದು ಲಕ್ಷದ ಒಳಗಿನ ಸೋಂಕು ದಾಖಲಾಗಿದೆ .ಮುಂದಿನ ದಿನದಲ್ಲಿ ‌ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.

15 ರಾಜ್ಯಗಳಲ್ಲಿ ಶೇ.5 ಕ್ಕೂ ಕಡಿಮೆ‌ ಸೋಂಕು

ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕೊರೊನಾ‌ ಸೋಂಕು ಸಂಖ್ಯೆ ಶೇ.5 ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ ಶೇ 94.3 ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.