ವಿಜಯದಶಮಿ ಅಂಗವಾಗಿ ಹುಬ್ಬಳ್ಳಿಯ ದಾಜೀಬಾನ್ ಪೇಟೆಯ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಆಡಳಿತ ಮಂಡಳಿ ವತಿಯಿಂದ ದೇವಸ್ಥಾನದಲ್ಲಿ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರಾದ ಸಂತೋಷ ಆರ್ ಶೆಟ್ಟಿ ಅವರನ್ನು ಎಸ್. ಎಸ್. ಕೆ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ ಗೌರವಿಸಿ ಸನ್ಮಾನಿಸಿದರು. ಕಿರಣ ಪೂಜಾರಿ, ಭಾಸ್ಕರ್ ಜಿತೂರಿ, ಜೆ.ವಿ.ಇರಕಲ್, ನಾಗರಾಜ ಪಟ್ಟಣ, ರವೀಂದ್ರ ರಾಮದುರ್ಗಕರ, ಗುರುರಾಜ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.