ಹುಬ್ಬಳ್ಳಿಯ ತೊರವಿಗಲ್ಲಿಯಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ ನಿಮಿತ್ತ ಉತ್ತರಾರ್ಧನೆ ಪ್ರಯುಕ್ತ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ಭಗವದ್ಗೀತಾ ಭಜನಾ ಮಹಿಳಾ ಮಂಡಳಿಯ ಸದಸ್ಯರು ಭಜನೆ, ಕೋಲಾಟ, ನೃತ್ಯದ ಮೂಲಕ ಮಂತ್ರ ಪಠಣದೊಂದಿಗೆ ನೆರವೇರಿತು. ಪಂಡಿತ ಶ್ರೀಹರಿ ಆಚಾರ್ಯ, ಪಂ.ನರಹರಿ ಆಚಾರ್ಯ, ಶ್ರೀನಿವಾಸ ಆಚಾರ್ಯ ಕಟ್ಟಿ, ವಾದಿರಾಜ ಕುಲಕರ್ಣಿ, ನಾಗರಾಜ ಕಟ್ಟಿ, ರಂಗನಾಥ ಕುಲಕರ್ಣಿ, ಗುಂಡಪ್ಪ ವಾಳ್ವೇಕರ, ಸುರೇಖಾ ಕುಲಕರ್ಣಿ, ಪರಿಮಳಾ ವಾಳ್ವೇಕರ ಮುಂತಾದವರು ಇದ್ದರು.