ಮಳೆ ಇಲ್ಲದೆ ರೈತರು ಬಿತ್ತಿದ ಬೆಳೆಗಳು ಒಣಗುತ್ತಿದ್ದು, ಈ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ಗಮನಹರಿಸಬೇಕೆಂದು ಸ್ವಾಭಿಮಾನಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಶಿವನಸಿಂಗ ಮೊಕಾಶಿ ಬೈಲಹೊಂಗಲ ಉಪಾವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ಇವರಿಗೆ ಮನವಿ ಸಲ್ಲಿಸಿದರು. ರಾಜ್ಯ ಉಪಾಧ್ಯಕ್ಷ ಬೀರಪ್ಪ ದೇಶನೂರ, ಮಲ್ಲಿಕಾರ್ಜುನ ಜುಟ್ಟನವರ, ಭೀಮಪ್ಪ ಹುದಲಿ, ಶಿದ್ಲಿಂಗಯ್ಯಾ ವಕ್ಕುಂದಮಠ, ಅಶೋಕ ಕಳಸನ್ನವರ, ನಾಗೇಂದ್ರ ಚೌಗಲೆ, ಚಂದ್ರಪ್ಪ ಮೊಕಾಶಿ, ಶಿದ್ದಪ್ಪ ಜಳಕದ, ಸೋಮಶೇಖರ ಕಲಘಟಗಿ ಹಾಗೂ ರೈತ ಮುಖಂಡರಿದ್ದರು.