
ಹಿರಿಯೂರು; ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ ಆಚರಣೆ
ಸಂಜೆವಾಣಿ ವಾರ್ತೆ
ಹಿರಿಯೂರು.ಆ.30 : ಹಿರಿಯೂರು ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬದ ವಾತಾವರಣ ಭಕ್ತಿ ಭಾವ ಸಡಗರ ಸಂಭ್ರಮದಿಂದ ಕೂಡಿತ್ತು ಹಬ್ಬದ ಮುನ್ನ ದಿನವೇನಾಗರೀಕರು ತಳಿರು ತೋರಣ ಬಾಳೆಕಂದು ಹೂವು ಹಣ್ಣು ಕೊಂಡುಕೊಳ್ಳುವ ದೃಶ್ಯ ಹೆಚ್ಚಾಗಿತ್ತು ಇಲ್ಲಿನ ಚಿನ್ನದ ಪದಕ ಪುರಸ್ಕೃತರಾದ ಎಂ.ಆರ್ ಅಮೃತ ಲಕ್ಷ್ಮಿ ಯವರು ತಮ್ಮ ಮನೆಯಲ್ಲಿ ಭಕ್ತಿ ಭಾವದಿಂದ ಶ್ರೀ ವರಮಹಾಲಕ್ಷ್ಮಿ ವ್ರತ ಆಚರಿಸಿದರು ಕಥಾ ಶ್ರಮಣ ಪೂಜಾ ಕಾರ್ಯಕ್ರಮ ಮಹಾ ಮಂಗಳಾರತಿ ಸುಮಂಗಲರಿಗೆ ಬಾಗೀನ ಅರ್ಪಣೆ ನಡೆಸಿದರು.