ಬೆಳಗಾವಿ ಸುವರ್ಣಸೌಧ ಪಕ್ಕದಲ್ಲಿಯ ಶಾಂತಗಿರಿ ಆಶ್ರಮದಲ್ಲಿ 1008 ಶ್ರೀ ಪಾಶ್ರ್ವನಾಥ ಭಗವಾನರಿಗೆ 105 ಶ್ರೀ ಸಿದ್ಧಸೇನ ಮಹಾರಾಜರ ನೇತೃತ್ವದಲ್ಲಿ ಮುಕುಟ ಸಪ್ತಮಿ ಕಾರ್ಯಕ್ರಮ ಆಚರಿಸಲಾಯಿತು. ಕ್ಷುಲಕ ಸೂರ್ಯ ಸೋಮದೇವ ಭೈಯ್ಯಾಜೀ, ಪ್ರತಿಷ್ಠಾಚಾರ್ಯ ವಿದ್ಯಾಧರ ಉಪಾಧ್ಯೆ, ಜೈನ ಯುವಕ ಮತ್ತು ಮಹಿಳಾ ಮಂಡಳ ಸೇರಿದಂತೆ ಹಲಗಾ-ಬಸ್ತವಾಡ ಸುತ್ತಮುತ್ತಲಿನ ಜೈನ ಶ್ರಾವಕ-ಶ್ರಾವಕೀಯರು ಉಪಸ್ಥಿತರಿದ್ದರು.