ಚಂದ್ರಯಾನ 3 ಯಶಸ್ವಿಯಾಗಲೆಂದು ಮತ್ತು ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯಲೆಂದು ಹುಬ್ಬಳ್ಳಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.ಸಿದ್ಧಾರೂಢ ಮಠದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಭಕ್ತರಿಂದ ಸಿದ್ಧಾರೂಢ ಮೂರ್ತಿಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿತು.ಚಂದ್ರಯಾನ ರಾಕೇಟ್ ಭಾವಚಿತ್ರ ಮತ್ತು ಧ್ವಜ ಹಿಡಿದು ಮಂತ್ರಗಳ ಜೊತೆಗೆ ವಿಜಯ ಘೋಷಣೆ ಮೊಳಗಿತು.ಇಸ್ರೋ ವಿಜ್ಞಾನಿಗಳ ಜೊತೆಗೆ ಭಾರತೀಯರ ಕನಸು ಈಡೇರುವಂತೆ ಶುಭಕೋರಲಾಯಿತು.