ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಸ್ನಾತಕೋತ್ತರ ವಿಜ್ಞಾನ ಸಪ್ತಾಹ-೨೦೨೩ರ ಕಾರ್ಯಕ್ರಮವನ್ನು ಬೆಂಗಳೂರಿನ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ. ಎಲ್. ಶಶಿಧರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೃವಿವಿ ಬೆಂಗಳೂರಿನ ಕುಲಪತಿ ಡಾ. ಎಸ್.ವಿ. ಸುರೇಶ, ಶಿಕ್ಷಣ ನಿರ್ದೇಶಕ ಡಾ. ಕೆ.ಸಿ ನಾರಾಯಣಸ್ವಾಮಿ, ಡೀನ್ (ಕೃಷಿ) ಡಾ.ಎನ್.ಬಿ. ಪ್ರಕಾಶ್, ಕುಲಸಚಿವ ಡಾ. ಬಸವೇಗೌಡ, ಡೀನ್ (ಸ್ನಾತಕೋತ್ತರ) ಡಾ. ಹೆಚ್.ಸಿ. ಪ್ರಕಾಶ್ ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.