
ಬಾದಾಮಿ ನಗರದ ಉಮೇಶ ಹವಳೆಯವರ ಸುಪುತ್ರಿ ಕುಮಾರಿ ಕಾವ್ಯ ಹವಳೆ ಅವರು ಎಂ.ಬಿ.ಬಿ.ಎಸ್ ವೈದ್ಯಕೀಯ ಕೋರ್ಸ ಗೆ ಆಯ್ಕೆಯಾದ ಪ್ರಯುಕ್ತ ಸಮಾಜದವತಿಯಿಂದ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಪುಲಕೇಶಿ ಬೊಂಬ್ಲೆ ಹಾಗೂ ಸಮಾಜದ ಮುಖಂಡರಾದ ಡಾ. ದೇವಗಿರಿಕರ ಹಂಚಾಟೆ, ರಾಘು ದಾಯಪುಲೆ, ವೆಂಕಟೇಶ ಸುಲಾಖೆ, ಕಾಶಿನಾಥ ಮಿರೆಜಕರ, ವಿನಾಯಕ ವೈಕುಂಠೆ, ವಿಜಯ ಹಾಸಲಕರ, ಲಕ್ಷ್ಮಣ ಮಾಂಡ್ರೆ ಅಂಬಿಕಾ ಹಂಚಾಟೆ, ಸಮಾಜ ಬಾಂಧವರು ಭಾಗವಹಿಸಿದ್ದರು.