
ಬಾದಾಮಿ ತಾಲೂಕಾ ಆಡಳಿತ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ದೇಶಭಕ್ತಿ ಗೀತೆ ಹಾಗೂ ನೃತ್ಯದಲ್ಲಿ ನಡೆದ ಸ್ಪರ್ಧೆ ಯಲ್ಲಿ ಸ್ಥಳೀಯ ವಿಶ್ವಹಿಂದೂ ಪರಿಷತ ಸಂಚಾಲಿತ ಚಾಲುಕ್ಯ ವಿದ್ಯಾಮಂದಿರ ಶಾಲೆಯ ಮಕ್ಕಳು ಭಾಗವಹಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ತಾಲೂಕು ಆಡಳಿತದಿಂದ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಇವರಿಂದ ಪದಕ ಪಡೆದರು. ಅವರನ್ನು ಶಾಲೆಯ ಮುಖ್ಯೋಪಾಧ್ಯಾಯ ಎಸ್.ವಿ.ವಸ್ತ್ರದ, ಸಹಶಿಕ್ಷಕರಾದ ಬಿ.ಬಿ.ಮುದಕನಗೌಡರ, ವ್ಹಿ.ಜಿ.ಲಮಾಣಿ, ನೇತ್ರಾವತಿ ಪಲ್ಲಕಿ, ಮಿನಾಕ್ಷಿ ಗುಜಮಾಗಡಿ, ರೇಖಾ ಉದಗಟ್ಟಿ, ಪಿ.ಎಲ್ ನಾಸಿ ಹಾಗೂ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಪೂಜಾರ ಹಾಗೂ ಆಡಳಿತಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.