ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ 77 ನೇ ಸ್ವಾತಂತ್ರ್ಯೋತ್ಸವ ನಿಮಿತ್ತವಾಗಿ ಹು-ಧಾ ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾನುಖಾನ್ , ಪುನಾಲ್ ಜೈನ್, ವಿಜಯ ದುಂದೂರ, ಮಂಜುನಾಥ ಶಾಬಾದ್, ಮಂಜುನಾಥ ಕಿತ್ತಳಿ, ರೋಹನ ಹುನಸವಾಡಕರ ಸೇರಿದಂತೆ ಉಪಸ್ಥಿತರಿದ್ದರು.