ಅಫಜಲಪುರ:ಸತತ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿರುವ ಅಫಜಲಪುರ ತಾಲೂಕಿನ ಸಂತ್ರಸ್ಥರಿಗೆ ಜಿಲ್ಲಾ ಜಮೀಯತೆ ಅಹ್ಲೆದಿಸ್ ಕಲಬುರಗಿ ಹಾಗೂ ಜಮೀಯತೆ ಅಹ್ಲೆದಿಸ ಅಫಜಲಪುರ ವತಿಯಿಂದ ತಾಲೂಕಿನ ಗೌರ (ಕೆ), ದಿಕ್ಸಂಗಾ, ತೆಲ್ಲೂಣಗಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿನ ಸಂತ್ರಸ್ಥರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.