73 ಪ್ರಕರಣ ದಾಖಲಿಸಿದ ಎನ್‌ಐಎ

ನವದೆಹಲಿ,ಜ.೧-ರಾಷ್ಟ್ರೀಯ ತನಿಖಾ ಸಂಸ್ಥೆ ೨೦೨೨ ರಲ್ಲಿ ಜಿಹಾದಿ ಭಯೋತ್ಪಾದನೆಯ ೩೫ ಪ್ರಕರಣಗಳು ಸೇರಿದಂತೆ ೭೩ ಪ್ರಕರಣಗಳನ್ನು ದಾಖಲಿಸಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಅತಿ ಹೆಚ್ಚಿನ ಪ್ರಕರಣ ಇದಾಗಿದೆ.
ಜಮ್ಮು ಕಾಶ್ಮೀರ, ಅಸ್ಸಾಂ ರಾಜ್ಯಗಳಲ್ಲಿ ಜಿಹಾದಿ ಭಯೋತ್ಪಾದನೆಯ ೩೫ ಪ್ರಕರಣಗಳು ಸೇರಿವೆ. ಬಿಹಾರ, ದೆಹಲಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ,ದಲ್ಲಿನ ೧೧ ಇತರ ಪ್ರಕರಣಗಳು ಹಾಗು ೧೦ ಮೂಲಭೂತವಾದಿ ಸಂಘಟನೆಗಳಿಗೆ ಸೇರಿದ ಪ್ರಕರಣ ದಾಖಲಾಗಿವೆ ಎಂದು ಎನ್‌ಐಎ ಮಾಹಿತಿ ನೀಡಿದೆ.
ಈ ಪ್ರಕರಣಗಳ ಜೊತೆಗೆ ಐದು ಈಶಾನ್ಯ ಬಂಡುಕೋರರಿಗೆಸಂಬಂಧಿಸಿದೆ, ಏಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಪಂಜಾಬ್‌ನ ನಾಲ್ಕು, ದರೋಡೆಕೋರ-ಭಯೋತ್ಪಾದನೆ-ಮಾದಕ ವಸ್ತು ಕಳ್ಳಸಾಗಣೆದಾರರ ಸಂಬಂಧದ ಮೂರು ಪ್ರಕರಣಗಳು, ಭಯೋತ್ಪಾದಕ ನಿಧಿಯ ಒಂದು ಪ್ರಕರಣ ಮತ್ತು ಎರಡು ನಕಲಿ ಭಾರತೀಯ ಕರೆಸ್ಸಿಗೆ ಸಂಬಂಧಿಸಿದ ಪ್ರಕರಣಗಳು ಎಂದು ಎನ್ ಐಎ ಅಧಿಕಾರಿಗಳು ತಿಳಿಸಿದ್ದಾರೆ.
೨೦೨೧ ರಲ್ಲಿ ದಾಖಲಾದ ೬೧ ಪ್ರಕರಣಗಳಿಗಿಂತ ಶೇ ೧೯.೬೭ ರಷ್ಟು ಹೆಚ್ಚಳವಾಗಿದೆ. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚಿನ ಪ್ರಕರಣ ಇದಾಗಿದೆ ಎಂದು ರಾಷ್ಡ್ರೀಯ ತನಿಖಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.
೨೦೧೯ ಮತ್ತು ೨೦೨೦ ರಲ್ಲಿ ಎನ್ ಐಎ ಸುಮಾರು ೬೦ ಪ್ರಕರಣ ದಾಖಲಿಸಿತ್ತು. ಕಳೆದ ವರ್ಷ ಹೆಚ್ಚಿನ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೩೬೮ ವ್ಯಕ್ತಿಗಳ ವಿರುದ್ದ ದೂರು:
೨೦೨೨ ರಲ್ಲಿ ೩೬೮ ವ್ಯಕ್ತಿಗಳ ವಿರುದ್ಧ ದಾಖಲು ಮಾಡಿದ್ದು ಅದರಲ್ಲಿ ೫೯ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.ಅದರಲ್ಲಿ ೩೮ ಪ್ರಕರಣಗಳಲ್ಲಿ ತೀರ್ಪು ಪ್ರಕಟಿಸಲಾಗಿದೆ, ಇವೆಲ್ಲವೂ ಅಪರಾಧದಲ್ಲಿ ಕೊನೆಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ೧೦೯ ವ್ಯಕ್ತಿಗಳಿಗೆ ದಂಡದ ಜೊತೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಆರು ಜೀವಾವಧಿ ಶಿಕ್ಷೆ ಸಹ ವಿಧಿಸಲಾಗಿದೆ.. ಇಲ್ಲಿಯವರೆಗೆ ಒಟ್ಟಾರೆ ಶಿಕ್ಷೆಯ ಪ್ರಮಾಣ ಶೇಕಡಾ ೯೪.೩೯ ಆಗಿದೆ ಎಂದು ಹೇಳಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ -ಯುಎಪಿಎ ಅಡಿಯಲ್ಲಿ ಎಂಟು ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಗುರುತಿಸಲಾಗಿದ್ದು ಅವರ ವಿರುದ್ಧ ಅಗತ್ಯ ಕ್ರಮವನ್ನು ಎನ್‌ಐಎ ತೆಗೆದುಕೊಳ್ಳುತ್ತಿದೆ” ಎಂದು ವಕ್ತಾರರು ತಿಳಿಸಿದ್ದಾರೆ.