73ನೇ ನಮೋ ಹುಟ್ಟುಹಬ್ಬ ಆಚರಣೆ

ಬಂಗಾರಪೇಟೆ.ಸೆ೧೯:ತಾಲ್ಲೂಕಿನ ಬೀರಂಡಹಳ್ಳಿ ಗ್ರಾಮದ ಶ್ರೀ ಸಾಯಿ ಜ್ಯೋತಿ ವೃದ್ಧಾಶ್ರಮದಲ್ಲಿ ನಮ್ಮ ದೇಶದ ಹೆಮ್ಮೆಯ ವಿಶ್ವದ ಅಪ್ರತಿಮ ಬಲಿಷ್ಠನಾಯಕ ಜನ ಮೆಚ್ಚಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿರವರ ೭೩ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ವೇಳೆ ವೃದ್ಧರಿಗೆ ಒಂದು ತಿಂಗಳಿಗೆ ಬೇಕಾಗಿರುವ ದಿನಸಿ ಪದಾರ್ಥಗಳಾದ ಅಕ್ಕಿ, ಬೇಳೆ, ಕಾಫಿ ಪುಡಿ, ಹಾಲು, ತರಕಾರಿ, ಇತ್ಯಾದಿಯನ್ನು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ನರೇಂದ್ರ ರಂಗಪ್ಪ ಪರವಾಗಿ ಗೋಲ್ಡ್ ರೆಡ್ಡಿ, ಸುಪ್ರಿಮ್ ವೆಂಕಟೇಶ್, ದೇವಗಾನಹಳ್ಳಿ ಅಮರನಾಥ್ ಆಶ್ರಮದ ವ್ಯವಸ್ಥಾಪಕಿ ವಿಜಯಲಕ್ಷ್ಮೀ, ಗೀತಾ ಅವರಿಗೆ ನೀಡಿದರು.