
ನಗರದ ಗಿರಣಿಚಾಳದ ನಿವಾಸಿಗಳಿಗೆ ಶಾಶ್ವತ ಹಕ್ಕುಪತ್ರ ನೀಡಬೇಕು ಹಾಗೂ ಗಿರಣಿಚಾಳ ಮೈದಾನವನ್ನು ಕೆಲವರು ಕಬಳಿಸಲು ಯತ್ನಿಸುತ್ತಿದ್ದು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಮಸ್ತ ಗಿರಣಿ ಚಾಳ ನಿವಾಸಿಗಳ ಸಂಘದ ವತಿಯಿಂದ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿ ಸಚಿವ ಸತೋಷ್ ಲಾಡ್ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಅವರಿಗೆ ಮನವಿ ಸಲ್ಲಿಸಿದರು. ಮೋಹನ್ ಹಿರೇಮನಿ, ಅನೀಲ್‍ಕುಮಾರ ಪಾಟೀಲ, ಹನುಮಂತಪ್ಪ ಮಾಲಪಲ್ಲಿ, ಮಾರುತಿ ಬಾರಕೇರ, ಗುರುನಾಥ ಗಾಂಜಗೋಳ, ಪರಶುರಾಮ ಪೂಜಾರ ಮತ್ತಿತರರು ಇದ್ದರು.