ಕಲಬುರಗಿ:ಪ್ರವಾಹದಿಂದ ಹಾನಿಗೊಳಗಾದ ಬಸವ ಕಲ್ಯಾಣ ತಾಲೂಕಿನ ಕಲಖೋರಾ , ಚಿಕನಾಗಾಂವ, ಮೂಡಬಿ ಗ್ರಾಮಗಳಿಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ರವರ ಜೊತೆ ಜೇವರ್ಗಿಯ ಶಾಸಕರು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಅವರು ಪರಿ ವೀಕ್ಷಣೆ ನಡೆಸಿದರು.ಈ ಸಂದರ್ಭದಲ್ಲಿ ಕಲಬುರಗಿ ಹಾಗೂ ಬೀದರ ಜಿಲ್ಲೆಯ ಶಾಸಕರು,ವಿಧಾನ ಪರಿಷತ್ ಸದಸ್ಯರು ,ಕಾರ್ಯಕರ್ತರು ಉಪಸ್ಥಿತರಿದ್ದರು