ಬಿಜೆಪಿ ಜೆ.ಡಿ.ಎಸ್. ಮೈತ್ರಿಗೆ ಒಲಿದ ಹರಟಿ ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ

ಕೋಲಾರ,ಆ.೧೦- ಎರಡನೇ ಅವಧಿಯ ಹರಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿಳ್ಳೆಂಗೆರೆ ಗ್ರಾಮದ ಆರ್.ವೆಂಕಟೇಶಪ್ಪ ಉಪಾಧ್ಯಕ್ಷರಾಗಿ ಚಾಮರಹಳ್ಳಿ ರತ್ನಮ್ಮ ಆಯ್ಕೆಯಾಗಿದ್ದಾರೆ. ಕೋಲಾರ ತಾಲ್ಲೂಕಿನ ಹರಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಮೇಸ್ತ್ರಿ ಆರ್ ವೆಂಕಟೇಶಪ್ಪ ೧೧ ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ, ಚಾಮರಹಳ್ಳಿ ರತ್ನಮ್ಮ ೧೧ ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹರಟಿ ಗ್ರಾಮ ಪಂಚಾಯಿತಿಯ ೨೧ ಸದಸ್ಯರನ್ನು ಒಳಗೊಂಡಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಜಿದ್ದಾಜಿದ್ದಿನ ಪೈಪೋಟಿ ಎದುರಾಗಿತ್ತು, ಕಾಂಗ್ರೇಸ್‌ನ ಶಿಳ್ಳೆಂಗೆರೆ ವೇಣುಗೋಪಾಲ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಾಪುರದ ಸಂಧ್ಯ ನಾಮಪತ್ರ ಸಲ್ಲಿಸಿದ್ದರು.

ತಲಾ ೧೦ ಮತಗಳನ್ನು ಪಡೆಯುವ ಮೂಲಕ ಹರಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ಗೆ ಭಾರಿ ಹಿನ್ನೆಡೆಯಾಗಿದೆ. ಇನ್ನು ಜೆಡಿಎಸ್, ಬಿಜೆಪಿ ಪಕ್ಷ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧ್ಯಕ್ಷರಾಗಿ ಮೇಸ್ತ್ರಿ ವೆಂಕಟೇಶಪ್ಪ, ಉಪಾಧ್ಯಕ್ಷರಾಗಿ ರತ್ನಮ್ನ ಆಯ್ಕೆಯಾಗಿ ಕಾಂಗ್ರೇಸ್‌ಗೆ ಟಾಂಗ್ ನೀಡಿದ್ದಾರೆ. ಇನ್ನು ೨ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗಧಿಯಾದ ಬಳಿಕ ಹರಟಿ ಗ್ರಾಮ ಪಂಚಾಯತಿಯನ್ನು ಬಿಜೆಪಿ ವಶಕ್ಕೆ ಪಡೆಯಲು ಅವಿರತವಾಗಿ ಪಟ್ನ ಬಾಬು, ಕೋಟಿಗಾನಹಳ್ಳಿ ಪ್ರಕಾಶ್, ಹರಟಿ ಕೃಷ್ಣಮೂರ್ತಿ ನಿರತಂತರವಾಗಿ ಶ್ರಮಿಸಿ ಅಂತಿಮವಾಗಿ ಬಿಜೆಪಿ ಹಾಗೂ ಜೆ.ಡಿ.ಎಸ್. ಮೈತ್ರಿ ಮಾಡಿಕೊಳ್ಳುವ ಮೂಲಕ ಹರಟಿ ಪಂಚಾಯತಿ ಅಧಿಕಾರದ ಗದ್ದುಗೆಯನ್ನು ವಶಕ್ಕೆ ಪಡೆದಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ನೂತನ ಅಧ್ಯಕ್ಷ ಮೇಸ್ತ್ರಿ ಆರ್ ವೆಂಕಟೇಶಪ್ಪ, ಹಳ್ಳಿಗಳಲ್ಲಿ ಮೊದಲಿಗೆ ಮೂಲಭೂತ ಸೌಲಭ್ಯ, ಬೀದಿ ದೀಪ, ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿ ಅಭಿವೃದ್ದಿಪಡಿಸಲು ಒತ್ತು ನೀಡಿ ಪಕ್ಷಾತೀತವಾಗಿ ಪಂಚಾಯಿತಿಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಹರಟಿ ಗ್ರಾಮ ಪಂಚಾಯಿತಿಯನ್ನು ಅಭಿವೃದ್ದಿ ಪಥದ ಕಡೆ ಕೊಂಡೊಯ್ಯಲು ನಿಷ್ಪಕ್ಷಪಾತವಾಗಿ ಶ್ರಮಿಸುವುದಾಗಿ ತಿಳಿಸಿದರು.

ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಚಾಮರಹಳ್ಳಿ ರತ್ನಮ್ಮ ಮಾತನಾಡಿ, ಮಾದರಿ ಪಂಚಾಯಿತಿಯನ್ನಾಗಿಸಲು ಎಲ್ಲರೂ ಒಗ್ಗೂಡಿ ಸೇವೆ ಸಲ್ಲಿಸುವಂತರವಾಗಬೇಕು ಎಂದು ಎಲ್ಲಾ ಸದಸ್ಯರಿಗೆ ಕಿವಿ ಮಾತು ಹೇಳಿದರು. ಚುನಾವಣಾಧಿಕಾರಿ ಮುನಿವೆಂಕಟರಾಮಚಾರಿ ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಬಿಜೆಪಿ ಹಾಗೂ ಜೆಡಿಎಸ್ ಗ್ರಾಮ ಪಂಚಾಯಿತಿ ಸದಸ್ಯರು ಹಾರ ಹಾಕಿ ಪಟಾಕಿ ಸಿಡಿ ಸಂಭ್ರಮಿಸುವ ಮೂಲಕ ಅಭಿನಂದಿಸಿದರು ಈ ಸಂದರ್ಭದಲ್ಲಿ ಪಿಡಿಓ ಲಕ್ಷ್ಮಿ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು, ಭಟ್ರಹಳ್ಳಿ ಗ್ರಾಪಂ ಸದಸ್ಯರುಗಳಾದ ಸುರೇಶ್ ಕುಮಾರ್, ಸ್ವಾತಿ ನಾಗೇಂದ್ರ, ಕೋಟಿಗಾನಹಳ್ಳಿ ಮಂಜಮ್ಮ ಪ್ರಕಾಶ್, ನಾರಾಯಣಪ್ಪ, (ಗ್ವಾರಪ್ಪ), ಪಟ್ನ ಶೈಲಜಾ ವಿನೋದ್, ಅಲ್ಲಿಕುಂಟೆ ಶ್ರೀನಿವಾಸ್, ಶಿಳ್ಳೆಂಗೆರೆ ಗ್ರಾಮ ಪಂ.ಸದಸ್ಯೆ ರಾಧಿಕಾ ಭಾಯಿ, ಸೇರಿದಂತೆ ಇತರೆ ಗ್ರಾಪಂ ಸದಸ್ಯರುಗಳು ಉಪಸ್ಥಿತರಿದ್ದರು.