ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಮಾತನಾಡಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಕಾಂಗ್ರೆಸ್ ಮುಖಂಡರುಗಳಾದ ಎ. ಆನಂದ್, ಜಿ. ಜನಾರ್ಧನ್, ಪ್ರಕಾಶ್, ಪರಿಸರ ರಾಮಕೃಷ್ಣ, ಜಿ. ಮೋಹನ್, ಒಬಳೇಶ್, ಚಿನ್ನಿಪ್ರಕಾಶ್, ಹೇಮಣ್ಣ, ಚಂದ್ರಶೇಖರ್, ಪುಟ್ಟರಾಜು ಮತ್ತಿತರರು ಭಾಗವಹಿಸಿದ್ದರು.