ನಗರದ ದೂಪನ ಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಭುವನೇಶ್ವರಿ ದೇವಿ ದೇವಸ್ಥಾನದ ಹೆಬ್ಬಾಗಿಲನ್ನು ತೆರವುಗೊಳಿಸಬಾರದೆಂದು ಒತ್ತಾಯಿಸಿ ಇಂದಿರಾನಗರದಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ಸುಮಾರು ೧೦ ಸಂಘಟನೆಗಳ ಕಾರ್ಯಕರ್ತರು ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀಧರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಹರ್ಪಿತಾರವರಿಗೆ ಮನವಿ ಸಲ್ಲಿಸಿದರು. ದೂಪನಹಳ್ಳಿ ಗ್ರಾಮಸ್ಥರುಗಳಾದ ಚಂದ್ರು, ಮಧು, ಜಗನ್ನಾಥ್, ವಿಜಯಕುಮಾರ್, ನವೀನ್, ರಾಜಣ್ಣ, ಮತ್ತಿತರರು ಇದ್ದಾರೆ.