
ಬೀದರ್:ಮಾ.25: ಮಹಾಕಾಳಿ ಸರಾಫ್ ಮತ್ತು ಸುವರ್ಣಕಾರ ಅಸೋಸಿಯೇಷನ್ ಬೆಳ್ಳಿ ಹಬ್ಬದ ಪ್ರಯುಕ್ತ ಇಲ್ಲಿಯ ಖಾದಿ ಭಂಡಾರ ಕಾಂಪ್ಲೆಕ್ಸ್‍ನಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 72 ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ಅಸೋಸಿಯೇಷನ್ ಬೆಳ್ಳಿ ಹಬ್ಬ ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಸೋಸಿಯೇಷನ್ ಪದಾಧಿಕಾರಿಗಳು, ವ್ಯಾಪಾರಿಗಳು ಹಾಗೂ ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಸುನೀಲ್ ಮೊಟ್ಟಿ ತಿಳಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷರಾದ ಅನಿಲಕುಮಾರ ಬಿರಾದಾರ, ಕಾರ್ಯದರ್ಶಿ ರವೀಂದ್ರ ಬಿರಾದಾರ, ರಮೇಶ ಶಿವಶರಣಪ್ಪ, ಸಂಜು ಕುಂಬಾರವಾಡ, ನಿಜಗುಣಿ ಶಹಾಪುರೆ, ಸಚಿನ್, ವಸಂತ ಕುಲಕರ್ಣಿ, ಸೌರಭ ಮೊಟ್ಟಿ, ಸಾಗರ್ ಮಾಶೆಟ್ಟಿ ಮತ್ತಿತರರು ಇದ್ದರು.