ಬಾದಾಮಿಯ ಶ್ರೀ ಶಿವಶರಣ ಹರಳಯ್ಯ ಸಮಾಜದ ವತಿಯಿಂದ ಚಮ್ಮಾರ ಸಮಾಜದ ದೃವ ತಾರೆ, ಹಸಿರು ಕ್ರಾಂತಿಯ ಹರಿಕಾರ, ಮಾಜಿ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 37 ನೇ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಸಮಾಜದ ಅದ್ಯಕ್ಷ ನಾಗರಾಜ ಹ ಹೊಸಮನಿ. ಸಮಾಜದ ಹಿರಿಯ ಮುಖಂಡರಾದ ಮಲಕಾಜಪ್ಪ ಚಂದಾವರಿ ಗೌರವ ಸೂಚಿಸಿದರು. ಈ ಸಂದರ್ಭದಲ್ಲಿ ರಮೇಶ್ ಕುಂದರಗಿ, ರವಿ ಮುಂಡೆವಾಡಿ, ರಾಜು ಮಬ್ರುಮಕರ, ವಿಜಯ ದೊಡಮನಿ, ಶ್ರೀಕಾಂತ್ ಸಾನಕ್ಯಾನವರ, ಶನಶಪ್ಪ ಸಾನಕ್ಯಾನವರ ಮೊದಲಾದವರು ಉಪಸ್ಥಿತರಿದ್ದರು.