ನಗರದ ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಯಿತು. ಶಿಬಿರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜಯಶ್ರೀ ಆರ್. ಸಾಲಿಮಠ್, ಉಪ ಪ್ರಾಂಶುಪಾಲ ಶಿಲ್ಪಾ ಬಿ.ಪಿ.,ಎನ್.ಎಸ್.ಎಸ್. ಸಂಯೋಜಕ ಸತ್ಯವತಿ, ಹಿರಿಯ ಪ್ರಾಧ್ಯಾಪಕರಾದ ಜ್ಯೋತಿ, ರಾಜೇಶ್ವರಿ, ರಾಧಿಕಾ ಗುಡಿಹಾಳ್, ಶಾರದಾ, ರೆಡ್ ಕ್ರಾಸ್ ಸಂಸ್ಥೆಯ ವೈದ್ಯರಾದ ಡಾ. ಪ್ರಸನ್ನ, ಡಾ.ಮಹೇಶ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.