ಅದರಗುಂಚಿ ಗ್ರಾ.ಪಂ. ಸದಸ್ಯ ದಿ. ಉಮೇಶಗೌಡ ನಿಂಗನಗೌಡ ಚಿಕ್ಕನಗೌಡ್ರ ಜನ್ಮದಿನ ನಿಮಿತ್ತ ಶ್ರೀ ದೊಡ್ಡೇಶ್ವರ ಯುವಕ ಮಂಡಲ ವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್. ಎಸ್. ಎಲ್. ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯರಾದ ಗುರುರಾಜ ದಾಸ್ಯಾಳ, ಕೊಳ್ಳಣ್ಣವರ, ಪ್ರಾನ್ಸಿ ಹಾಗೂ ಶಾಲಾ ಸಿಬ್ಬಂದಿ ನಿಂಗಪ್ಪ ಮೊರಬದ, ಬಸಪ್ಪ ಬಂಗಿ, ಬಸವರಾಜ ಮಾರಣ್ಣವರ, ಗುರು ಹಿರೇಮಠ, ಪ್ರವೀಣ್ ಹಿರೇಗೌಡ್ರ ಉಪಸ್ಥಿತರಿದ್ದರು.