ವಿಜಯಪುರ ಪಟ್ಟಣದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ವತಿಯಿಂದ ಶನಿವಾರದಂದು ಮಹಾತ್ಮ ಪ್ರೌಢಶಾಲೆಯ ಆವರಣದಲ್ಲಿ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷರಾದ ಚಿ. ಮಾ. ಸುಧಾಕರ್ ಉಪನ್ಯಾಸವನ್ನು ನೀಡಿದರು. ಮಿತ್ರ ಸಂಘದ ಗೌರವ ಅಧ್ಯಕ್ಷರಾದ ವಿ. ವಿಶ್ವನಾಥ್, ಶಾಲಾ ಶಿಕ್ಷಕರಾದ ಅಶ್ವಥ ನಾರಾಯಣ, ಪವನ್, ರವಿ ಮಂಜುಳಾ, ಶಶಿಕಲಾ ಹಾಗೂ ವೆಂಕಟೇಶ್ ಉಪಸ್ಥಿತರಿದ್ದರು.