ವಿಜಯಪುರ ಪಟ್ಟಣದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ, ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಎಲ್ಲಾ ವೈದ್ಯರಿಗೆ ಹೂಗುಚ್ಚವನ್ನು ನೀಡುವ ಮೂಲಕ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶಾಮ ಸುಂದರ್ ದಂತವೈದ್ಯರುಗಳಾದ ಡಾ||ರಚನಾ, ಡಾಕ್ಟರ ಉದಯ್, ಅರಿವಳಿಕೆ ತಜ್ಞರಾದ ಶ್ರೀಧರ್, ಆಯುಷ್ ವೈದ್ಯರಾದ ಡಾ||ಸುನೀತಾ, ಪ್ರಸೂತಿ ತಜ್ಞೆ ಡಾ||ಕರ್ಪಗಂರವರುಗಳು. ಪ್ರಗತಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಬಸವರಾಜು, ಶಿಕ್ಷಕಿ ಸುನೀತಾ, ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು