700 ಟನ್ ಆಕ್ಸಿಜನ್ ಉತ್ಪಾದನೆಗೆ ಮಕೇಶ್ ಅಂಬಾನಿ ತೀರ್ಮಾನ

ಮುಂಬೈ: ಕೊರೊನಾ ದಿಂದ ತೀವ್ರ ಬಾಧಿತ ರಾಜ್ಯಗಳಿಗೆ ಉಚಿತವಾಗಿ ವೈದ್ಯಕೀಯ ಆಕ್ಸಿಜನ್ ಪೂರೈಸುವುದಕ್ಕಾಗಿ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದಿನವೊಂದಕ್ಕೆ ಸುಮಾರು 700 ಟನ್ ಆಕ್ಸಿಜನ್ ತಯಾರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಜಾಮ್ ನಗರದಲ್ಲಿರುವ ತೈಲ ಸಂಸ್ಕರಣಾ ಘಟಕದಿಂದ ಆರಂಭಿಕವಾಗಿ 100 ಟನ್ ವೈದ್ಯಕೀಯ ಆಕ್ಸಿಜನ್ ತಯಾರಿಸಲಾಗುತಿತ್ತು. ಈಗ ಆಕ್ಸಿಜನ್ ಉತ್ಪಾದನೆಯನ್ನು 700 ಟನ್ ಗಳಿಗೆ ಹೆಚ್ಚಿಸಲು ಮುಂದಾಗಿದೆ.
ಗುಜರಾತ್. ಮಹಾರಾಷ್ಟ್ರ, ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಆಕ್ಸಿಜನ್ ಪೂರೈಸುವುದರಿಂದ ಪ್ರತಿದಿನ ಸುಮಾರು 70 ಸಾವಿರ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ನೆರವಾಗಲಿದೆ. ವೈದ್ಯಕೀಯ ಗ್ರೇಡ್ ಆಕ್ಸಿಜನ್ ಉತ್ಪಾದನೆ ಸಾಮರ್ಥ್ಯವನ್ನು 1 ಸಾವಿರ ಟನ್ ಗಳಿಗೆ ಹೆಚ್ಚಿಸಲು ಕಂಪನಿ ಯೋಜಿಸಿರುವುದಾಗಿ ಮೂಲಗಳು ಹೇಳಿವೆ.ಗುಜರಾತ್. ಮಹಾರಾಷ್ಟ್ರ, ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಆಕ್ಸಿಜನ್ ಪೂರೈಸುವುದರಿಂದ ಪ್ರತಿದಿನ ಸುಮಾರು 70 ಸಾವಿರ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ನೆರವಾಗಲಿದೆ. ವೈದ್ಯಕೀಯ ಗ್ರೇಡ್ ಆಕ್ಸಿಜನ್ ಉತ್ಪಾದನೆ ಸಾಮರ್ಥ್ಯವನ್ನು 1 ಸಾವಿರ ಟನ್ ಗಳಿಗೆ ಹೆಚ್ಚಿಸಲು ಕಂಪನಿ ಯೋಜಿಸಿರುವುದಾಗಿ ಮೂಲಗಳು ಹೇಳಿವೆ.