700ದಶ ಲಕ್ಷ ಡಾಲರ್ ಮೌಲ್ಯದ ಇಂಧನ ಶ್ರೀಲಂಕಾಕ್ಕೆ ಪೂರೈಕೆ: ಗೋಪಾಲ್ ಬಾಗ್ಲೆ

ಕೊಲೊಂಬೋ, ಜು.21- ಭಾರತದಿಂದ ಸರಿ ಸುಮಾರು 700 ದಶಲಕ್ಷ ಡಾಲರ್ ಮೌಲ್ಯದ ಇಂಧನ ಶ್ರೀಲಂಕಾಕ್ಕೆ ಸರಬರಾಜು ಆಗಿದೆ.ಮುಂದೆಯೂ ಮುಂದುವರಿಯಲಿದೆ ಎಂದು ಶ್ರೀಲಂಕಾದಲ್ಲಿರುವ ಭಾರತದ ರಾಯಬಾರಿ ಗೋಪಾಲ್ ಬಾಗ್ಲೆ ಹೇಳಿದ್ದಾರೆ.

ವಾಣಿಜ್ಯ ಪೂರೈಕೆಯೂ ಮುಂದುವರಿದಿದೆ. ಈಗ, ಶ್ರೀಲಂಕಾ ಸರ್ಕಾರ ದ ಅವಶ್ಯಕತೆಗಳನ್ನು ಪೂರೈಸಲು ಇತರ ಮಾರ್ಗಗಳನ್ನು ಹುಡುಕುತ್ತಿದೆ ಎಂದು ಹೇಳಿದ್ದಾರೆ.

ಭಾರತ ಸದಾ ಶ್ರೀಲಂಕಾದ ಜನರೊಂದಿಗೆ ನಿಂತಿದೆ, ಇದು ನಮ್ಮ ನೆರೆಯ ಸ್ನೇಹಿತ, ಪಾಲುದಾರ ಮತ್ತು ಎರಡೂ ದೇಶಗಳು ಪ್ರಜಾಪ್ರಭುತ್ವ ರಾಷ್ಟ್ರಗಳು. ಆದ್ದರಿಂದ, ಬಹಳ ತುರ್ತಾಗಿ ಸಹಾಯವನ್ನು ಕೋರಿದಾಗ ಶ್ರೀಲಂಕಾದ ಸಹಾಯಕ್ಕೆ ಬರಲು ಭಾರತದ ಪ್ರಯತ್ನವಾಗಿದೆ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತ ಶ್ರೀಲಂಕಾಕ್ಕೆ ನೀಡಿದ ಸಹಾಯ ಮತ್ತು ಬೆಂಬಲ ಅನನ್ಯ,ಬೇರೆ ಯಾವುದೇ ದೇಶಕ್ಕೆ ಇಷ್ಟೊಂದು ಸಹಕಾರ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾದ ಜನರ ಅಗತ್ಯತೆಗಳಿಗೆ ನಾವು ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ: ಸದ್ಯ ತಲೆ ದೋರಿರುವ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲ‌ಂಕಾವನ್ನು ಪಾರು ಮಾಡಲು ಸಾದ್ಯ ಎಲ್ಲ ರೀತಿಯ ಬೆಂಬಲ ಮತ್ತು ಸಹಾಯವನ್ನು ಭಾರತ ಮುಂದುವರಿಸಲಿದೆ ಎಂದು ಅವರು ಖಚಿತ ಮಾತುಗಳಲ್ಲಿ ಹೇಳಿದ್ದಾರೆ

ನೆರೆಹೊರೆ ದೇಶವಾಗಿ ದ್ವೀಪರಾಷ್ಟ್ರ ಶ್ರೀಲಂಕಾವನ್ನು ಬೆಂಬಲಿಸುವುದು ಮತ್ತು ಅದರ ಅಗತ್ಯಗಳನ್ನು ಪೂರೈಸುವುದು ಭಾರತದ ಕರ್ತವ್ಯ ಎಂದು ನವದೆಹಲಿ ಭಾವಿಸಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾದ ದಿನದಿಂದ ಇಲ್ಲಿಯತನಕವೂ ಭಾರತದಿಂದ ಎಲ್ಲ ರೀತಿಯ ನೆರವು ಮತ್ತು ಸಹಕಾರ ನೀಡಲಾಗಿದೆ ಮುಂದಿನ ದಿನಗಳಲ್ಲಿ ಸಹಕಾರ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.