70ನೇ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆ

ರಾಯಚೂರ.ನ.09- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ 70ನೇ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆ ಹಾಗೂ ಧ್ವಜಾ ದಿನಾಚರಣೆಯನ್ನು ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಳಾಗಿ ಮಾನ್ಯ ಬಿ.ಎಚ್.ಗೋನಾಳ್ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ರವರು ಆಗಮಿಸಿದ್ದರು, ಅಧ್ಯಕ್ಷತೆಯನ್ನು ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್ ವಹಿಸಿದ್ದರು, ಮೊದಲಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬಸವರಾಜ ಬೋರಡ್ಡಿ ಜಿಲ್ಲಾ ಆಯುಕ್ತರು ಸ್ಕೌಟ್ ರವರು ಎಲ್ಲಾರಿಗೂ ಸ್ವಾಗತಿಸಿದರು. ನಂತರ ಲಾರ್ಡ್ ಬೇಡನ್ ಪಾವೇಲ್ ಮತ್ತು ಲೇಡಿ ಬೇಡನ್ ಪಾವೇಲ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ನಂತರ ದಿನಾಚರಣೆಯ ಅಂಗವಾಗಿ ಸಸಿನೆಡುವ ಕಾರ್ಯಕ್ರಮ ಮತ್ತು ಸದ್ಭಾವನಾ ಓಟಕ್ಕೆ ಚಾಲನೆ, ಹಾಗೂ ಹಸಿರು ದೀಪಾವಳಿ ಹಬ್ಬಕ್ಕೆ ಮಾನ್ಯ ಬಿ.ಎಚ್.ಗೋನಾಳ್ ಡಿ.ಡಿ.ಪಿ.ಐ.ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದಾನಮ್ಮ ಜಿಲ್ಲಾ ಖಜಾಂಚಿಗಳು, ಅಮರೇಗೌಡ ಪಾಟೀಲ್ ಜಿಲ್ಲಾ ಸಹ ಕಾರ್ಯದರ್ಶಿ, ನಾಗೇಶ ಗೌಡ ಡಿ.ಟಿ.ಸಿ ಮತ್ತು ಡಿ.ಒ.ಸಿ ಸ್ಕೌಟ್, ಎನ್.ಶೇಖರ್ ಸ್ಥಳೀಯ ಸಂಸ್ಥೆ ರಾಯಚೂರು ಕಾರ್ಯದರ್ಶಿಗಳು, ಉಷಾಬಾಯಿ, ಶ್ರೀಮತಿ ರಾಜಶ್ರೀ ಸಜ್ಜನ, ಶಕುಂತಲಾ, ಸ್ಕೌಟ್ ಮಾಸ್ಟರ್ ಕಾಶೀನಾಥ, ರೋವರ್ಸ್ ಜಯಸಿಂಹ, ಶಿವಪ್ರಕಾಶ್ ಕೋರಿ ಬಸವರಾಜ ಗದಗಿನ ಜಿಲ್ಲಾ ಕಾರ್ಯದರ್ಶಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.