
ಕೋಲಾರ,ನ,೧೫:ರಾಜ್ಯ ಸಹಕಾರಿ ಮಹಾ ಮಂಡಳಿ,ಜಿಲ್ಲಾ ಸಹಕಾರಿ ಒಕ್ಕೂಟ,ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದ್ದೋದ್ದೇಶ ಸಹಕಾರ ಸಂಘನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಯನ್ನು ನ೧೪ ರಿಂದ ೨೦ರವರೆಗೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ತಿಳಿಸಿದರು.
ನಗರದ ಜಿಲ್ಲಾ ಸಹಕಾರ ಒಕ್ಕೂಟದ ನೂತನ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡಿ ನ೧೪ ಮಂಗಳವಾರ ಬೆಳಿಗ್ಗೆ ೧೦.೩೦ಕ್ಕೆ ಒಕ್ಕೂಟದ ಅವರಣದಲ್ಲಿ ಸಪ್ತವರ್ಣ ಧ್ವಜಾರೋಹಣವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಎಂ. ಗೋವಿಂದಗೌಡರು ಮತ್ತು ಕಾರ್ಯಕ್ರಮವನ್ನು ಇಪ್ಕೋ ಟೋಕಿಯೂ ಜನರಲ್ ಇನ್ಸೂರೆನ್ಸ್ ಕಂಪನಿಯ ಅಧ್ಯಕ್ಷರಾದ ಕೆ.ಶ್ರೀನಿವಾಸಗೌಡರು ಉದ್ದಾಟಿಸಲಿದ್ದಾರೆ ಎಂದರು.
ಈ ಭಾರಿಯ ಸಪ್ತಾಹದ ಧ್ಯೇಯ ” ೫ ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ದಿ ಗುರಿಗಳು “ಎಂಬ ಘೋಷವಾಕ್ಯದೊಂದಿಗೆ ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಎಂಬ ವಿಷಯವನ್ನು ಮಂಡಲಿಸಲಿದೆ ಎಂದು ಹೇಳಿದರು,
ನ,೧೫ ಬುಧವಾರ ಮಧ್ಯಾಹ್ನ ೧.೩೦ಕ್ಕೆ ಮುಳಬಾಗಿಲಿನ ಒಕ್ಕೂಟದ ಕ್ಯಾಂಪಸ್ ಕಚೇರಿಯಲ್ಲಿ ಶಾಸಕ ಸಮೃದ್ದಿ ವಿ. ಮಂಜುನಾಥ್ ಉದ್ಘಾಟಿಸಲಿದ್ದು” ಸಾಲೇತರ ಸಹಕಾರ ಸಂಘಗಳ ಪುನಃಶ್ವೇತನ ಹಾಗೂ ಅರ್ಥಿಕ ಸೇರ್ಪಡೆ “ಎಂಬ ವಿಷಯವನ್ನು ಧ್ಯೇಯವಾಗಿಸಿ ಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ನ,೧೬ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಬಂಗಾರಪೇಟೆ ದೇಶಹಳ್ಳಿ ಹಾಲಯ ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದು ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಉದ್ಘಾಟಿಸಲಿದ್ದಾರೆ. ” ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ “ಎಂಬ ವಿಷಯವಾಗಿ ಕಾರ್ಯಕ್ರಮವನ್ನು ಆಚರಿಸಲಿದೆ ಎಂದರು.
ನ,೧೭ರ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಶ್ರೀನಿವಾಸಪುರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿ ಕೊಂಡಿದ್ದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉದ್ಘಾಟಿಸುವರು. “ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪರ ಪ್ರಕ್ರಿಯೆ ಮತ್ತು ಉದಯೋನ್ಮೂಖ ವಲಯಗಳು” ಎಂಬ ವಿಷಯವನ್ನು ಮಂಡಿಸಲಾಗುವುದು. ನ,೧೮ರ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಮಾಲೂರಿನ ಕೋಚಿಮುಲ್ ಉಪಕಚೇರಿಯಲ್ಲಿ ಆಯೋಜಿಸಿದ್ದು ಶಾಸಕ ಕೆ.ವೈ. ನಂಜೇಗೌಡ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವವನ್ನು ಬಲ ಪಡಿಸುವುದು ” ಎಂಬ ವಿಷಯವಾಗಿ ಪ್ರಸ್ತಪಿಸಲಿದೆ ಎಂದು ತಿಳಿಸಿದರು,
ನ,೧೯ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಕೆ.ಜಿ.ಎಫ್ ತಾಲ್ಲೂಕಿನ ಬೇತಮಂಗಲದಲ್ಲಿ ಶಾಸಕಿ ರೂಪಕಲಾ ಶಶಿಧರ್ ಉದ್ಘಾಟಿಸಲಿದ್ದಾರೆ.” ಮಹಿಳೆಯರು,ಯುವಜನ ಮತ್ತು ಅಬಲವರ್ಗಕ್ಕೆ ಸಹಕಾರ ಸಂಸ್ಥೆಗಳು ” ಎಂಬ ವಿಷಯವಾಗಿ ಆಚರಿಸಲಾಗುವುದು.ನ,೨೦ರ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಚರಿಸಲಾಗುವುದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದ್ದೋದ್ದೇಶಿತ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಉದ್ಘಾಟಿಸಲಿದ್ದಾರೆ. ” ಸಹಕಾರ ಶಿಕ್ಷಣ ತರಬೇತಿಯ ಪರಿಷ್ಕರಣೆ ” ಎಂಬ ವಿಷಯವನ್ನು ಮಂಡಿಸಲಾಗುವುದು ಎಂದು ವಿವರಿಸಿದರು,
ಒಕ್ಕೂಟದ ಉಪಾಧ್ಯಕ್ಷ ಕಲ್ವಮಂಜಲಿ ಟಿ.ಕೆ. ಬೈರೇಗೌಡ, ಮಾಜಿ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ, ನಿರ್ದೇಶಕರಾದ ಉರಿಗಿಲಿ ಎಸ್.ಆರ್.ರುದ್ರಸ್ವಾಮಿ,ಡಿ.ಆರ್.ರಾಮಚಂದ್ರೇಗೌಡ, ಮೂರಂಡಹಳ್ಳಿ ಡಾ.ಇ.ಗೋಪಾಲ್, ಎಸ್.ವಿ.ಗೋವರ್ಧನ್ ರೆಡ್ಡಿ, ವಿ.ರಘುಪತಿಗೌಡ, ಬಿ.ರಮೇಶ್, ಪಿ.ಎಂ. ವೆಂಕಟೇಶ್, ಎನ್.ನಾಗರಾಜ್. ಕೆ.ಎಂ.ಮಂಜುನಾಥ್, ಪಿ.ಎನ್.ಕೃಷ್ಣರೆಡ್ಡಿ, ಕೆ.ಎಂ.ವೆಂಕಟೇಶಪ್ಪ,ಶೇಕ್ ಮಹಮ್ಮದ್, ಆರ್.ಅರುಣಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಕೆ.ಎಂ. ವ್ಯವಸ್ಥಾಪಕಿ ಎನ್.ಲಕ್ಷ್ಮೀದೇವಿ, ಸಹಾಯಕರಾದ ರವಿ ಮುಂತಾದವರು ಉಪಸ್ಥಿತರಿದ್ದರು,