7 ವಾರ್ಡ್ ನಲ್ಲಿ ಆಮ್ ಆದ್ಮಿ ಸ್ಪರ್ಧೆ

ಬಳ್ಳಾರಿ, ಏ.17: ಇಲ್ಲಿನ ಮಹಾನಗರ ಪಾಲಿಕೆಗೆ ಈ ತಿಂಗಳು ನಡೆಯುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ 7 ವಾರ್ಡ್ ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆಂದು ಆಮ್ ಆದ್ಮಿ
ಪಕ್ಷದ ರಾಜ್ಯ ಸಂಚಾಲಕ ಮೋಹನ್ ದಾಸರಿ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು ಜನ ಬೆಂಬಲಿಸಿದರೆ ದೆಹಲಿ ಮಾದರಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದೆಂದರು.
ಪಕ್ಷ ಅಧಿಕಾರಕ್ಕೆ ಬಂದ ಕಡೆ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮಾಡಿದೆ. ರೇಷನ್, ಸರಕಾರಿ ಸೇವೆ ಮನೆ ಬಾಗಿಲಿಗೆ ನೀಡಿದ್ದೇವೆ. ದೆಹಲಿಯಲ್ಲಿ ಪಕ್ಷ ಮಾಡಿರುವ ಸಾಧನೆಗಳು
ಪ್ರಾಮಾಣಿಕರು ಅಧಿಕಾರಕ್ಕೆ ಬಂದರೆ ಏನು ಮಾಡಬಹುದೆಂಬುದನ್ನು ತೋರಿಸಿಕೊಟ್ಟಿದೆಂದರು.
7 ಸ್ಪರ್ಧಿಗಳು:
ನಾಗರತ್ನ 17 ನೇ ವಾರ್ಡ್, ತರಕಾರಿ ವ್ಯಾಪಾರ ಮಾಡುತ್ತಿದ್ದ ಜಾನಕಿರಾಂ 8ನೇ ವಾರ್ಡ್, ವಕೀಲ ಮಂಜುನಾಥ 23ನೇ ವಾರ್ಡ್, ಪದ್ಮಾವತಿ 25ನೇ ವಾರ್ಡ್, ಆನಂದ್ 38, ನಾಗೇಶ್ 35, ಬಹುದ್ದೀನ್ 9ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದಾರೆಂದು ಮಾಹಿತಿ ನೀಡಿದರು.
ದೇಶದಲ್ಲಿ ಜನರು ಪರ್ಯಾಯ ಶಕ್ತಿಯನ್ನು ಹುಡುಕುತ್ತಿದ್ದು, ಆಮ್ ಆದ್ಮಿ ಪಾರ್ಟಿ ಪರ್ಯಾಯ ಶಕ್ತಿ ಆಗುತ್ತಿದೆ. ಇಷ್ಟರಲ್ಲೇ ಚುನಾವಣಾ ಪ್ರನಾಳಿಕೆ ಬಿಡುಗಡೆ ಮಾಡಲಾಗುವುದು. ರಾಜ್ಯ ನಾಯಕರು ಬಂದು ಪ್ರಚಾರ ನಡೆಸಲಿದ್ದಾರೆ ಎಂದರು.
ಪಕ್ಷದ ಜಿಲ್ಲಾ ಅದ್ಯಕ್ಷ ವಿ.ಬಿ. ಮಲ್ಲಪ್ಪ, ಮುಕುಂದ ಗೌಡ, ಚುನಾವಣಾ ವೀಕ್ಷಕ ಗುರುಮೂರ್ತಿ ಮೊದಲಾದವರು ಇದ್ದರು.