7 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಜಪ್ತಿ

ಕಲಬುರಗಿ,ಏ.14-ಡಿಸಿಐಬಿ ಅಧಿಕಾರಿಗಳು ಗುರುವಾರ ನಗರದಾದ್ಯಂತ ಕಾರ್ಯಾಚರಣೆ ನಡೆಸಿ 3 ಜನ ಆರೋಪಿಗಳನ್ನು ಬಂಧಿಸಿ 183 ಲೀಟರ್ ಮದ್ಯ, 46 ಲೀಟರ್ ಬೀಯರ್, 6 ಬೈಕ್, 2 ತ್ರಿಚಕ್ರ ವಾಹನ ಸೇರಿ 737832 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ 8 ಪ್ರಕರಣ ದಾಖಲು ಮಾಡಲಾಗಿದೆ. ಕಲಬುರಗಿ ಉಪ ವಿಭಾಗದ ಡಿಸಿಐಬಿ ಕಲಬುರಗಿ ವಲಯ 1 ಮತ್ತು 2ರ ತಂಡಗಳು ಈ ಕಾರ್ಯಾಚರಣೆ ನಡೆಸಿವೆ.