7 ರಂದು ಬಸವಕಲ್ಯಾಣದಲ್ಲಿ ಸಮಾನತೆ ಸಮಾವೇಶ

ಕಲಬುರಗಿ,ಜ 2: ಬಸವ ಮಹಾಮನೆ ಟ್ರಸ್ಟ್ ವತಿಯಿಂದ ಜ.7 ರಂದು ಮಧ್ಯಾಹ್ನ 1 ಗಂಟೆಗೆ ಬಸವಕಲ್ಯಾಣದಲ್ಲಿ ಡಾ. ಸಿದ್ಧರಾಮ ಬೆಲ್ದಾಳ ಶರಣರ ನೇತೃತ್ವದಲ್ಲಿ ಸಮಾನತೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾನತೆ ಸಮಾವೇಶದ ಕಲಬುರಗಿ ಘಟಕದ ಸಂಯೋಜಕ ಲಿಂಗರಾಜ ಸಿರಗಾಪೂರ ತಿಳಿಸಿದರು
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಬಸವಾದಿ ಶರಣರ ವಚನಗಳ ಸಮಾನತೆ ಸಂದೇಶ ಆಚರಣೆಯಲ್ಲಿ ಬರುತ್ತಿಲ್ಲ.ಅಸಮಾನತೆ ಶೋಷಣೆ,ಹತಾಶೆ ಬೆಳೆಯುತ್ತಲಿದೆ.ಇದಕ್ಕೆ ಸಕಲ ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕ, ಮಾನವಿಯತೆ ಮತ್ತು ಸಮಾನತೆ ಭಾವನೆ ಮುಖ್ಯವಾಗಿರಬೇಕಾಗಿದೆ.ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾನತೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಮಾವೇಶದಲ್ಲಿ ನಾಡಿನ ಪೂಜ್ಯರು, ಧಾರ್ಮಿಕ ಮುಖಂಡರು, ರಾಜಕೀಯ ಧುರೀಣರು,ಬುದ್ಧಿ ಜೀವಿಗಳು, ಸಾಹಿತಿಗಳು, ವಿವಿಧ ಸಂಘಟನೆಗಳ ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ.ಅದರಂತೆ ವಿವಿಧ ಜಿಲ್ಲೆಗಳಿಂದಲೂ ಅನೇಕರು ಆಗಮಿಸಲಿದ್ದಾರೆ. ಸಂಯೋಜಕ ಡಾ.ಎ.ಎಸ್.ಭದ್ರಶೆಟ್ಟ,ಬಿ.ಬಿ.ನಿಂಗಪ್ಪ, ಶಾಂತಪ್ಪ ಕಾರಭಾಸಗಿ,ರಾಜೆ ಶಿವಶಂಕರ್, ಅಬ್ದುಲ್ ರಹೀಂ ಸುದ್ದಿಗೋಷ್ಠಿಯಲ್ಲಿ ಇದ್ಧರು.