7 ನೇ ವಾರ್ಡಿನಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡುಗಳ ಹಂಚಿಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.14:  ನಗರದ 7ನೇ ವಾರ್ಡಿನ ಬಾಪೂಜಿ ನಗರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳನ್ನು ಮನೆಮನೆಗೆ ಹಂಚುವ ಕಾರ್ಯ ಪಕ್ಷದ  ಪ್ರಚಾರ ಸಮಿತಿಯ ರಾಜ್ಯ ಜಂಟಿ ಸಂಯೋಜಕರು ಹಾಗೂ ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ, ಪಾಲಿಕೆ ಸದಸ್ಯೆ ಉಮಾದೇವಿ, ಮುಖಂಡ ಶಿವರಾಜ್ ಹೆಗಡೆ ಅವರಿಂದ ನಡೆಯಿತಿ.
ಪ್ರತಿ ಮನೆಗೆ ಮನೆಗೆ ಭೇಟಿ ನೀಡಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಪ್ರತೀ ಕುಟುಂಬದ ಮಹಿಳೆಗೆ ರೂ.2000, ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆಂದು ಮತದಾಋಇಗೆ ತಿಳಿಸಿದರು.
ಈ ಸಂದರ್ಭದಲ್ಲಿ  ಪಜ್ಷದ ಮುಖಂಡರಾದ ತಾಯಣ್ಣ , ಪ್ರಶಾಂತ್,ಮಲ್ಲಿ, ಟೈಲರ್ ರಾಜು, ಬಸವ, ಕಾಶಿ, ರೇಣು, ದುರ್ಗಾ ಪ್ರಸಾದ್, ರಘು, ಲೋಕೆಶ್, ಕಿರಣ್ ಮೊದಲಾದವರು ಉಪಸ್ಥಿತರಿದ್ದರು.